ಪ್ರಮುಖ ಸುದ್ದಿಮೈಸೂರು

ನಾನ್ ದುಡ್ಡು ಅಲ್ಲೇ ಬಿಟ್ಟು ಬಂದಿದ್ದೀನಾ. ನನಗೆ ಹೆದರಿ ಐಟಿ ಬಿಟ್ಟಿದ್ದಾರೆ : ರೆಸಾರ್ಟ್ ದಾಳಿಗೆ ಸಿಎಂ ತೀಕ್ಷ್ಣ ಪ್ರತಿಕ್ರಿಯೆ

ಮೈಸೂರು,ಮೇ.8:- ಐಟಿ ಇಲಾಖೆಯನ್ನು  ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಬಾದಾಮಿಯಲ್ಲಿ ಸಿಎಂ ಉಳಿದಿದ್ದ ಆನಂದ್ ಸಿಂಗ್ ಅವರ  ರೆಸಾರ್ಟ್ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರಂತಹ ಮೂರ್ಖರು ಯಾರೂ ಇಲ್ಲ. ಬಾದಾಮಿಯಲ್ಲಿ ನಾನು ವಾಸ್ತವ್ಯ ಹೂಡಿದ್ದ ರೆಸಾರ್ಟ್ ಮೇಲೆ ದಾಳಿ ಮಾಡಿದ್ದಾರೆ. ಐಟಿ ಇಲಾಖೆಯನ್ನು ನರೇಂದ್ರ ಮೋದಿ, ಅಮಿತ್ ಶಾ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಾಮನ್ ಸೆನ್ಸ್ ಇದ್ಯಾ ಅವ್ರಿಗೆ, ನಾನ್ ದುಡ್ಡು ಅಲ್ಲೇ ಬಿಟ್ಟು ಬಂದಿದ್ದೀನಾ. ನನಗೆ ಹೆದರಿ ಐಟಿ ಬಿಟ್ಟಿದ್ದಾರೆ. ಇದೊಂದು ನಾನ್ ಸೆನ್ಸ್ ವಿಚಾರ. ಅಮಿತ್ ಷಾ ಉಳಿದುಕೊಂಡಿದ್ದ ರೂಂ ಯಾಕೆ ರೈಡ್ ಮಾಡಲ್ಲ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಮನೆ ಮೇಲೆ ಯಾಕೆ ದಾಳಿ ಮಾಡಿಲ್ಲ. ಸಿಎಂ ಆಪ್ತ ಮರಿಸ್ವಾಮಿಗೌಡ ಮನೆ ರೈಡ್ ಆಯ್ತು ಅಂತಾರೆ ಎಲ್ಲಿ ರೈಡ್ ಆಗಿದೆ. ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂದು ಬಿಜೆಪಿ ಮಂದಿಗೆ ಗೊತ್ತಾಗಿದೆ. ಹೀಗಾಗಿ ಹೆದರಿ ವಾಮ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಅತ್ಯಂತ ಬಹುಮತದ ಜೊತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: