ಮೈಸೂರು

ಮಹಿಳೆಯೊಬ್ಬರ ಫೋರ್ಜರಿ ಸಹಿ ಹಾಕಿ ಹಣ ಲಪಟಾಯಿಸಿದ್ದ ಪ್ರಕರಣ : ಮಾಜಿ ಮೇಯರ್ ಆರ್.ಜಿ. ನರಸಿಂಹ ಅಯ್ಯಂಗಾರ್ ಗೆ ಒಂದು ವರ್ಷ ಜೈಲು

ಮೈಸೂರು,ಮೇ.8:- ಮಾಜಿ ಮೇಯರ್  ಆರ್.ಜಿ. ನರಸಿಂಹ ಅಯ್ಯಂಗಾರ್ ಗೆ ದೂರುದಾರ  ಮಹಿಳೆಯೊಬ್ಬರ ಫೋರ್ಜರಿ ಸಹಿ ಹಾಕಿ ಹಣ ಲಪಟಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಒಂದನೇ ಹೆಚ್ಚುವರಿ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10ಸಾವಿರ ರೂ.ದಂಡ ವಿಧಿಸಿ ತೀರ್ಪಿತ್ತಿದೆ.

1993ರಲ್ಲಿ ಆರ್ ಜಿ.ನರಸಿಂಹ ಅಯ್ಯಂಗಾರ್ ಅವರು ಅಲಹಾಬಾದ್ ಬ್ಯಾಂಕ್ ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ದೂರುದಾರರಾದ ಎಂ.ಬಿ.ಪಾರ್ವತಿ ಬಿದ್ದಪ್ಪ ಪರವಾಗಿ ಪ್ರಕರಣ ದಾಖಲಿಸಿದ್ದರು. 2006ರಲ್ಲಿ ಪ್ರಕರಣ ಕುರಿತಂತೆ ದೂರುದಾರರ ಪರವಾಗಿ ತೀರ್ಪು ನೀಡಿದ್ದ ನ್ಯಾಯಾಲಯ ಪಾರ್ವತಿಯವರ ಹೆಸರಿನಲ್ಲಿ 84,600 ಮತ್ತು 500 ರೂ.ಗಳ ಎರಡು ಚೆಕ್ ಗಳನ್ನು ನ್ಯಾಯಾಲಯಕ್ಕೆ ನೀಡುವಂತೆ ಆದೇಶಿಸಿತ್ತು. ವಕೀಲರೂ ಆದ ನರಸಿಂಹ ಅಯ್ಯಂಗಾರ್ ದೂರುದಾರರಾದ ಪಾರ್ವತಿ ಅವರ ನಕಲಿ ಸಹಿ ಹಾಕಿ ಪರಿಹಾರದ ಚೆಕ್ ನಗದೀಕರಿಸಿ ಹಣವನ್ನು ತಾವೇ ಪಡೆದಿದ್ದರು. ಎಂ.ಬಿ.ಪಾರ್ವತಿ ಬಿದ್ದಪ್ಪ ಈ ಕುರಿತು 2008ರಲ್ಲಿ ದೂರು ದಾಖಲಿಸಿದ್ದರು. ಕೆ.ಆರ್.ಪೋಲಿಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಫೋರ್ಜರಿ ಸಹಿ ಮಾಡಿರುವುದು ಧೃಡಪಟ್ಟ ಹಿನ್ನೆಲೆಯಲ್ಲಿ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಯಶವಂತ್ ಕುಮಾರ್ ಅವರು ನರಸಿಂಹ ಅಯ್ಯಂಗಾರ್ ಗೆ ಒಂದು ವರ್ಷ ಜೈಲು ಮತ್ತು 10ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಕೆ.ಎಂ.ಸಿ ಶಿವಶಂಕರ ಮೂರ್ತಿ ವಾದಿಸಿದ್ದರು. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: