
ಮೈಸೂರು
ಸೆಸ್ಕ್ ನೌಕರನ ಕರ್ತವ್ಯಕ್ಕೆ ಅಡ್ಡಿ: ದಂಪತಿ ಜೈಲಿಗೆ
ಸೆಸ್ಕ್ ವಿದ್ಯುತ್ ಬಿಲ್ ಕಲೆಕ್ಟರ್ನ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಗಳನ್ನು ಉದಯಗಿರಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಮೈಸೂರಿನ ಗೌಸಿಯಾ ನಗರದ ಯೂಸೂಫ್ ಪಾಷಾ ಹಾಗೂ ಪತ್ನಿ ಸಬೀಹಾ ಎಂಬುವರು ಬಿಲ್ ಕಲೆಕ್ಟರ್ ಶಿವಲೀಲಾ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಈ ಬಗ್ಗೆ ಶಿವಲೀಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ಪಿ.ಪಿ. ಸಂತೋಷ್ ದಂಪತಿಗಳನ್ನು ಬಂಧಿಸಿ ನ್ಯಾಯಾಂಗದ ವಶಕ್ಕೊಪ್ಪಿಸಿದ್ದಾರೆ. ಅಲ್ಲಿಂದ ಜೈಲಿಗೆ ವರ್ಗಾಯಿಸಲಾಗಿದೆ. ಎಸ್.ಐ. ಜಯಕೀರ್ತಿ, ಎಎಸ್ಐ ಬಾಬು ಲೋಕನಾಥ್, ಪುಟ್ಟರಾಜು ಹಾಗೂ ಇತರೆ ಸಿಬ್ಬಂದಿಗಳು ತನಿಖೆಗೆ ಸಹಕರಿಸಿದ್ದಾರೆ.