ಸುದ್ದಿ ಸಂಕ್ಷಿಪ್ತ

ಬದನವಾಳು ಶಾಲೆಗೆ 100 ಫಲಿತಾಂಶ

ಮೈಸೂರು,ಮೇ.8:- ನಂಜನಗೂಡು ತಾಲೂಕಿನ ಬದನವಾಳು ಶ್ರೀ ಶಿವಯೋಗಿಸ್ವಾಮಿ ಪ್ರೌಢಶಾಲೆಯು ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ  ಶೇಕಡಾ 100 ಫಲಿತಾಂಶದ ಸಾಧನೆ ಮಾಡಿದೆ.

ಪರೀಕ್ಷೆಗೆ ಹಾಜರಾಗಿದ್ದ 32 ವಿದ್ಯಾರ್ಥಿಗಳಲ್ಲಿ 31 ಪ್ರಥಮ ದರ್ಜೆ ಮತ್ತು ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ  ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶಾಲೆಯು ಇಂಥ ಫಲಿತಾಂಶವನ್ನು ತರಲು ಕಾರಣರಾದ ಆಡಳಿತ ಮಂಡಳಿ, ಪೋಷಕರು ಹಾಗೂ ಶಾಲಾ ಸಿಬ್ಬಂದಿಯನ್ನು ಮುಖ್ಯೋಪಾಧ್ಯಾಯರಾದ ಎಂ.ಪಿ. ನಟರಾಜು ಅವರು ಅಭಿನಂದಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: