ಕ್ರೀಡೆ

ಆರ್ ಸಿಬಿ ಬಗ್ಗೆ ನಟಿ ಪ್ರಿಯಾಮಣಿ ಮಾಡಿದ ಟ್ವಿಟ್ ಏನು.?

ಮುಂಬೈ,ಮೇ 8-ಐಪಿಎಲ್ ನ 11ನೇ ಆವೃತ್ತಿ ಪ್ರಾರಂಭವಾಗುತ್ತಿದ್ದಂತೆ ಆರ್ ಸಿಬಿ ತಂಡದ ಅಭಿಮಾನಿಗಳು `ಈ ಸಲ ಕಪ್ ನಮ್ದೆ’ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆರ್ ಸಿಬಿ ಫ್ಲೇ-ಆಫ್ ಗೆ ಹೋಗುವ ಕನಸು ಬಹುತೇಕ ಭಗ್ನವಾಗಿದೆ.

ಸೋಮವಾರ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ ಸಿಬಿ ವಿರೋಚಿತ ಸೋಲು ಕಂಡಿದೆ. ಗೆಲುವಿನ ದಡದಲ್ಲಿ ಎಡವಿ ಎದುರಾಳಿ ತಂಡಕ್ಕೆ ಪಂದ್ಯ ಬಿಟ್ಟುಕೊಟ್ಟಿದೆ. ಈ ಮೂಲಕ ಆರ್ ಸಿಬಿ ತನ್ನ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ.

ಆರ್ ಸಿಬಿ ಸೋಲುತ್ತಿದ್ದಂತೆ ನಟಿ ಪ್ರಿಯಾಮಣಿ ಟ್ವಿಟ್ ಮಾಡಿದ್ದು, ಎರಡು ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದ್ಭುತ ಪಂದ್ಯ. ಚಾಂಪಿಯನ್ಸ್ ತಮ್ಮ ತಂಡದ ಮೊತ್ತವನ್ನ ಸಮರ್ಥಿಸಿಕೊಂಡಿದ್ದಾರೆ. ಕೊನೆಯವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ ಸನ್ ರೈಸ್ ಗೆಲುವು ಕಂಡಿದೆ. ಆರ್.ಸಿ.ಬಿ ತಂಡವೂ ಉತ್ತಮವಾಗಿ ಆಡಿದೆ ಎಂದು ಟ್ವಿಟ್ ಮಾಡಿದ್ದಾರೆ.

ಪ್ರಿಯಾಮಣಿ ಅಭಿನಯದ ‘ಧ್ವಜ’ ಚಿತ್ರ ಇತ್ತೀಚಿಗಷ್ಟೆ ತೆರೆಕಂಡಿತ್ತು. ಸದ್ಯ, ‘ನನ್ನ ಪ್ರಕಾರ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮಿಳಿನ ಒಂದು ಚಿತ್ರದಲ್ಲೂ ಪ್ರಿಯಾಮಣಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: