ಕರ್ನಾಟಕಪ್ರಮುಖ ಸುದ್ದಿ

ನರೇಂದ್ರ ಸ್ವಾಮಿ ಬದಲು ನರೇಂದ್ರ ಮೋದಿಗೆ ವೋಟ್ ಕೊಟ್ಟರೆ ನನಗೆ ಕೊಟ್ಟ ಹಾಗೆ ಎಂದ್ಹೇಳಿ ಯಡವಟ್ಟು ಮಾಡಿಕೊಂಡ ಸಿಎಂ

ರಾಜ್ಯ(ಮಂಡ್ಯ)ಮೇ.8:-  ಚುನಾವಣೆ ಹತ್ತಿರ ಬರುತ್ತಿದ್ದಂತೆ ಎದುರಾಳಿಗಳನ್ನು ತೆಗಳುವುದು ಸಾಮಾನ್ಯ. ಆದರೆ ಅದು ಅತಿಯಾದರೆ ಎಂತಹ ಯಡವಟ್ಟಾಗುತ್ತದೆ ಎಂಬುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉತ್ತಮ ಉದಾಹರಣೆಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನರೇಂದ್ರ ಸ್ವಾಮಿ ಮತಯಾಚನೆ ಮಾಡಲು ಏರ್ಪಡಿಸಿದ್ದ ರೋಡ್‌ ಶೋ ವೇಳೆ ನರೇಂದ್ರ ಸ್ವಾಮಿ ಬದಲಿಗೆ ನರೇಂದ್ರ ಮೋದಿಯವರ ಹೆಸರು ಹೇಳಿದ ಸಿಎಂ ನರೇಂದ್ರ ಮೋದಿಗೆ ವೋಟು ಕೊಟ್ಟರೆ ನನಗೆ ಕೊಟ್ಟ ಹಾಗೆ ಎಂದು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ.

ತಕ್ಷಣ ತಮ್ಮ ತಪ್ಪು ತಿದ್ದಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ನರೇಂದ್ರ ಮೋದಿ ಮಿಥ್ಯ, ನರೇಂದ್ರ ಸ್ವಾಮಿ ಸತ್ಯ ಎಂದು ತಮ್ಮ ಹೇಳಿಕೆಯನ್ನು ಬದಲಾಯಿಸಿಕೊಂಡರು.

ಜೆಡಿಎಸ್ ಪ್ರಣಾಳಿಕೆ ಕುರಿತು ಮಾತನಾಡಿದ ಅವರು ಜೆಡಿಎಸ್‌ ಪ್ರಣಾಳಿಕೆ ವಾಟಾಳ್ ನಾಗರಾಜ್‌ ಪ್ರಣಾಳಿಕೆಯಿದ್ದಂತೆ. ಹೀಗಾಗಿ ಜೆಡಿಎಸ್‌ಗೆ ಮತ ಹಾಕಬೇಡಿ ಎಂದರು. ಸೂರ್ಯ ಹುಟ್ಟೋದು ಎಷ್ಟು ಸತ್ಯವೋ, ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಜೊತೆಗೆ ನರೇಂದ್ರ ಸ್ವಾಮಿ ಗೆದ್ದರೆ ನಾನು ಮುಖ್ಯಮಂತ್ರಿ ಆಗೋದು ಸತ್ಯ. ಅವರಿಗೂ ಮಂತ್ರಿ ಆಗುವ ಸಾಧ್ಯತೆ ಕೂಡ ಇದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: