ಮೈಸೂರು

ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗೆ ಪರೀಕ್ಷೆ : 6673 ಪರೀಕ್ಷಾರ್ಥಿಗಳು ಹಾಜರ್

police-web-2ರಾಜ್ಯದಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗೆ ಮೈಸೂರಿನಲ್ಲಿ ಭಾನುವಾರ ಪೊಲೀಸ್ ಕಣ್ಗಾವಲಿನಲ್ಲಿ ಲಿಖಿತ ಪರೀಕ್ಷೆ ನಡೆಯುತ್ತಿದೆ.

ಮೈಸೂರಿನ ವಿದ್ಯಾವರ್ಧಕ, ವಿದ್ಯಾವಿಕಾಸ, ಮಹಾಜನ, ಎಸ್ ಡಿಎಂ, ಸೇಂಟ್ ಫಿಲೋಮಿನಾ, ಸೇಂಟ್ ಜೋಸೆಫ್, ಚಿನ್ಮಯ ಸೇರಿದಂತೆ 16 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.  ಪರೀಕ್ಷೆಯಲ್ಲಿ ಒಟ್ಟು 6673 ಪರೀಕ್ಷಾರ್ಥಿಗಳು ಹಾಜರಾಗಿದ್ದಾರೆ.

ಬಯೋಮೆಟ್ರಿಕ್ ಗುರುತು ಪಡೆಯಬೇಕಾಗಿದ್ದರಿಂದ ಪರೀಕ್ಷಾರ್ಥಿಗಳು ಬೆಳಿಗ್ಗೆ 8.30ಕ್ಕೆ ತಮಗೆ ನೀಡಿದ ಗುರುತು ಪತ್ರದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಬೆಳಿಗ್ಗೆ 10ರಿಂದ 11.30ರವರೆಗೆ, ಮಧ್ಯಾಹ್ನ 2ರಿಂದ 3.30ರವರೆಗೆ ಪರೀಕ್ಷೆಗಳು ನಡೆಯಲಿವೆ. ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ  ಅಳವಡಿಸಲಾಗಿದ್ದು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರದ ಜಿಲ್ಲೆಗಳಿಂದ ಆಗಮಿಸಿದ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಪರೀಕ್ಷಾ ಕಾರ್ಯಕ್ಕೆ 8ಮಂದಿ ಡಿವೈಎಸ್ಪಿ ಮಟ್ಟದ ಅಧಿಕಾರಿಗಳು, ಪ್ರತಿ 200 ಮಂದಿ ಪರೀಕ್ಷಾರ್ಥಿಗಳಿಗೆ ಓರ್ವ ಇನ್ಸಪೆಕ್ಟರ್ ಗಳು ಹಾಗೂ ಸಿಬ್ಬಂದಿಗಳು ನಿಯೋಜನೆಗೊಂಡಿದ್ದು, ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರೀಕ್ಷಾ ಗುರುತಿನ ಪತ್ರ, ಕಪ್ಪು ಅಥವಾ ನೀಲಿ ಇಂಕ್ ಪೆನ್ನು ಹೊರತುಪಡಿಸಿ ಅಭ್ಯರ್ಥಿಗಳು ಬೇರೆ ಯಾವ ವಸ್ತುವನ್ನೂ ತಮ್ಮ ಜೊತೆ ಕೊಂಡು ತಂದಿಲ್ಲ.

Leave a Reply

comments

Related Articles

error: