ಮನರಂಜನೆ

ಮಗನ ಸಿನಿಮಾಗಾಗಿ ಮನೆ ಮಾರಿದ ಸ್ಟಾರ್ ಡೈರೆಕ್ಟರ್.!

ಹೈದರಾಬಾದ್,ಮೇ 8-ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳುವ ಸ್ಟಾರ್ ಡೈರೆಕ್ಟರ್ ಒಬ್ಬರು ತಮ್ಮ ಮಗನಿಗಾಗಿ ಮನೆ ಮಾರಿ ಸಿನಿಮಾ ಮಾಡಿದ್ದಾರೆ. ಈ ವಿಚಾರವನ್ನು ಖುದ್ದು ಆ ಸ್ಟಾರ್ ಡೈರೆಕ್ಟರ್ ಯೇ ಬಹಿರಂಗ ಪಡಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ತಮ್ಮ ಮಗನ ಚಿತ್ರಕ್ಕಾಗಿ ಮನೆ ಮಾರಿ ಸಿನಿಮಾ ಮಾಡಿದ್ದಾರೆ. ಪೂರಿ ಜಗನ್ನಾಥ್ ಅವರ ಮಗ ಆಕಾಶ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಮಗನ ಚೊಚ್ಚಲ ಸಿನಿಮಾವನ್ನ ಪೂರಿ ಜಗನ್ನಾಥ್ ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದಾರೆ.

ಬೇರೆ ಬ್ಯಾನರ್ ನನ್ನ ಮಗನ ಸಿನಿಮಾ ಮಾಡಿದರೆ ಯಾರು ಸಿನಿಮಾ ನೋಡ್ತಾರೆ? ಅದಕ್ಕೆ ನಾನೇ ರಿಸ್ಕ್ ತೆಗೆದುಕೊಂಡಿದ್ದೇನೆ. ಸಿನಿಮಾಗೋಸ್ಕರ ನನ್ನ ಬಳಿ ಇದ್ದ ಆಸ್ತಿಯಲ್ಲಿ ಒಂದು ಮನೆಯನ್ನ ಮಾರಿದ್ದೇನೆ. ನನ್ನ ಮಗನ ಮೇಲೆ ನನಗೆ ನಂಬಿಕೆ ಇದೆ. ಅದಕ್ಕೆ ಅವನ ಮೇಲೆ ಇಷ್ಟೊಂದು ಹಣ ಹಾಕಿದ್ದೇನೆ. ನನ್ನ ಜೀವನದಲ್ಲಿ ಎಷ್ಟು ಬಾರಿ ಹಣ ಕಳೆದುಕೊಂಡಿದ್ದೇನೆ. ಅದೇ ರೀತಿ ಮತ್ತೆ ಸಂಪಾದನೆ ಮಾಡಿದ್ದೀನಿ. ಪ್ರತಿ ಸಲವೂ ಶೂನ್ಯದಿಂದಲೇ ನಾನು ಆರಂಭಿಸುತ್ತೇನೆ. ಅಲ್ಲಿಂದಲೇ ತಯಾರಾಗುತ್ತೇನೆ ಎಂದು ನಿರ್ದೇಶಕ ಪೂರಿ ಜಗನ್ನಾಥ್ ತಿಳಿಸಿದ್ದಾರೆ.

ಮೇ 11 ರಂದು ಪೂರಿ ಜಗನ್ನಾಥ್ ಅವರ ಮಗ ಆಕಾಶ್ ಪೂರಿ ಅಭಿನಯದ ಚೊಚ್ಚಲ ಸಿನಿಮಾಮೆಹಬೂಬ್ಸಿನಿಮಾ ಬಿಡುಗಡೆಯಾಗುತ್ತಿದೆ. 1971ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದಲ್ಲಿ ನಡೆಯುವ ಪ್ರೇಮಕಥೆ ಇದಾಗಿದ್ದು, ಆಕಾಶ್ ಪೂರಿ ಸೈನಿಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟಿ ನೇಹಾ ಶೆಟ್ಟಿ ಆಕಾಶ್ ಅವರಿಗೆ ನಾಯಕಿಯಾಗಿ ಅಭಿನಯಿಸುವ ಮೂಲಕ ತೆಲುಗು ಇಂಡಸ್ಟ್ರಿಯಲ್ಲಿ ತಮ್ಮ ಸಿನಿ ಜರ್ನಿ ಆರಂಭಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: