ಮೈಸೂರು

ಸಂಗೀತ ಸುಧೆಯಲ್ಲಿ ಮುಳುಗೆದ್ದ ಜನತೆ

jss-web-2ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆ.ಎಸ್.ಎಸ್ ಮಹಿಳಾ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣೆ 23ನೇ ಸಂಗೀತ ಸಮ್ಮೇಳನದ ಎರಡನೇ ದಿನ ವಿದ್ವತ್ ಗೋಷ್ಠಿ ನಡೆಯಿತು. ಬಳಿಕ ಸಂಗೀತ ಕಚೇರಿ ಜರುಗಿತು.

ಸಂಗೀತ ಕಚೇರಿಯಲ್ಲಿ ವಿದುಷಿ ವಾಣಿ ಸತೀಶ್ ಗಾಯನಕ್ಕೆ ವಯೊಲಿನ್ ನಲ್ಲಿ ಅಧಿತಿ ಕೃಷ್ಣಪ್ರಕಾಶ್, ಮೃದಂಗದಲ್ಲಿ ಅನಿರುದ್ಧ ಭಟ್, ಮುಖತಾರಾದಲ್ಲಿ ರಾಮಾನುಜನ್ ಸಾಥ್ ನೀಡಿದರು.

ಸಾಯಂಕಾಲ ನಡೆದ ಕಾರ್ಯಕ್ರಮದಲ್ಲಿ ಯುಎಸ್ ಎ ಜಿ.ಕೆ.ಮೋಹನಕೃಷ್ಣ ಅವರ ಗಾಯನಕ್ಕೆ ವಯೊಲಿನ್ ನಲ್ಲಿ ಸುಮಂತ್, ಮೃದಂಗದಲ್ಲಿ ಸಾಯಿಶಿವು ಲಕ್ಷ್ಮಿಕೇಶವ ಸಾಥ್ ನೀಡಿದರು.

ನೂರಾರು ಸಂಗೀತಾಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಸಂಗೀತ ಸುಧೆಯಲ್ಲಿ ಮುಳುಗೆದ್ದರು.

Leave a Reply

comments

Related Articles

error: