ಮೈಸೂರು

ಪತ್ರಕರ್ತನ ಕ್ಷಮೆ ಯಾಚಿಸಿದ ಸಚಿವ ತನ್ವೀರ್ ಸೇಠ್

ಮೈಸೂರು,ಮೇ.8 : ಎನ್.ಆರ್.ಕ್ಷೇತ್ರದ ವರದಿಗೆಂದು ತೆರಳಿದ್ದ ‘ಟೈಮ್ಸ್ ಆಫ್ ಇಂಡಿಯಾ’ದ ವರದಿಗಾರ ಶೀವೇಂದ್ರ ಅರಸ್ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಸಚಿವ ತನ್ವೀರ್ ಸೇಠ್ ಬೆಂಬಲಿಗರು ನಡೆಸಿದ ಕೃತ್ಯಕ್ಕೆ ಸ್ವಯಂ ಸಚಿವ ತನ್ವೀರ್ ಸೇಠ್ ಕ್ಷಮೆಯಾಚಿಸಿದ್ದಾರೆ.

ಪರಿಚಯವಿಲ್ಲದ ಕೆಲವರು ಅವರಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ನನಗೆ ತೀವ್ರ ನೋವಾಗಿದೆ, ಹಾಗಾಗಿ ನಾನಿದ್ದ ಸ್ನೇಹಿತನ ಮನೆಗೆ ಕರೆಸಿಕೊಂಡಿಸಿಕೊಂಡು ಅವರಲ್ಲಿ ಕ್ಷಮೆ ಯಾಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಸಹ ಚುನಾವಣಾ ಒತ್ತಡದಲ್ಲಿದ್ದು, ರಾಜಕೀಯ ವಿರೋಧಿಗಳು ಈ ವಿಷಯವನ್ನೇ ನನ್ನ ವಿರುದ್ಧ ಷಡ್ಯಂತರಕ್ಕೆ ಬಳಸುತ್ತಿದ್ದಾರೆ ಇದರಿಂದ ನೋವಾಗಿದ್ದು ಕಾರ್ಯಕರ್ತರ ಪರವಾಗಿ ಪತ್ರಕರ್ತ ಶೀವೇಂದ್ರ ಅರಸ್ ಅವರಲ್ಲಿ ಬಹಿರಂಗ ಕ್ಷಮೆ ಯಾಚಿಸುತ್ತಿರುವೆ ಎಂದು ಹೇಳಿಕೆ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: