Uncategorized

ಮತದಾನ ಜಾಗೃತಿ ಜಾಥಾ

ರಾಜ್ಯ(ಮಡಿಕೇರಿ)ಮೇ.8:- ಸೋಮವಾರಪೇಟೆ ಪಟ್ಟಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತದಾನ ಜಾಗೃತಿ ಜಾಥಾ ನಡೆಸಿದರು.

ಮೇ.12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು. ನಿಮ್ಮ ಮತ ದೇಶಕ್ಕೆ ಹಿತ, ಬನ್ನಿ ಮತ ಚಲಾಯಿಸೋಣ ಸುಂದರ ನಾಡು ಕಟ್ಟೋಣ, ನಿಮ್ಮದು ಕೇವಲ ಮತವಲ್ಲ ಪ್ರಜಾಪ್ರಭುತ್ವದ ಮೌಲ್ಯ ಎಂಬ ಭಿತ್ತಿಪತ್ರಗಳನ್ನು ಹಿಡಿದು ರಸ್ತೆಯಲ್ಲಿ ಸಾಗಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು, ಬಿಟಿಸಿಜಿ ಪದವಿ ಪೂರ್ವ ಕಾಜೇಜು ಹಾಗೂ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿ ಗಳು ಜಾಥದಲ್ಲಿ ಭಾಗವಹಿಸಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: