
ಮೈಸೂರು
ವಿಮಾನ ತುರ್ತು ಭೂ ಸ್ಪರ್ಶ: ಅಪಾಯದಿಂದ ಪಾರಾದ ಪ್ರಯಾಣಿಕರು
ಕೊಲ್ಕತ್ತಾದಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ಜೆಟ್ ಏರ್ವೇಸ್ ವಿಮಾನವು ತಾಂತ್ರಿಕ ನ್ಯೂನ್ಯತೆಯಿಂದ ತುರ್ತು ಭೂಸ್ಪರ್ಶ ಮಾಡಿರುವ ಘಟನೆಯು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಜರುಗಿದೆ.
ವಿಮಾನದ ಪೈಲಟ್ ಹೈಡ್ರಾಲಿಕ್ ವೈಫಲ್ಯವಿದೆ ಎಂದು ಮಾಹಿತಿ ನೀಡಿದ್ದರಿಂದ ಹೈದ್ರಾಬಾದ್ನ ರಾಜೀವ್ಗಾಂಧಿ ಏರ್ಪೋರ್ಟ್ನಲ್ಲಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ನೀಡಲಾಗಿದ್ದು ರಾತ್ರಿ ಸುಮಾರು 8:40ಕ್ಕೆ ಲ್ಯಾಂಡಿಂಗ್ ಆಗಿದೆ. ವಿಮಾನ ಪರಿಶೀಲಿಸಿದ ನುರಿತರು ಒಂದು ಟೈರ್ ಪಂಕ್ಟರ್ ಆಗಿರುವ ಬಗ್ಗೆ ತಿಳಿಸಿದ್ದಾರೆ. ಪೈಲಟ್ನ ಸಮಯೋಚಿತ ಕ್ರಮದಿಂದಾಗಿ ವಿಮಾನದಲ್ಲಿದ್ದ 147 ಪ್ರಯಾಣಿಕರು ಹಾಗೂ 8 ಜನ ಸಿಬ್ಬಂದಿ ವರ್ಗದವರು ಸುರಕ್ಷಿತರಾಗಿದ್ದಾರೆ.
ಹೈದ್ರಾಬಾದ್ ಏರ್ಪೋರ್ಟ್ನ ರನ್ವೇಯನ್ನು ಎರಡು ಗಂಟೆಗಳ ಕಾಲ ರದ್ದು ಮಾಡಲಾಗಿತ್ತು. ಇಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಹತ್ತಿರದ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಪೈಲಟ್ನ ಸಮಯೋಚಿತ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.