ಮೈಸೂರು

ಗೆಲುವಿಗಾಗಿ ಸ್ಪರ್ಧಿಸಿ ಆದರೆ ಅಡ್ಡದಾರಿ ಹಿಡಿಯಬೇಡಿ: ಎನ್ಐಇ ಪದವೀಧರರಿಗೆ ಕೃಷ್ಣಕುಮಾರ್ ನಟರಾಜನ್

ಎನ್ಐಇ ಯಲ್ಲಿ ನಡೆದ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಮತ್ತು ಪದಕಗಳನ್ನು ಸ್ವೀಕರಿಸಿದರು.

ಮೈಂಡ್ ಟ್ರೀ ಲಿಮಿಟೆಡ್‍ನ ಕಾರ್ಯನಿರ್ವಾಹಕ ಅಧ್ಯಕ್ಷ ಕೃಷ್ಣಕುಮಾರ್ ನಟರಾಜನ್ ಅವರು ಕ್ರಾರ್ಯಕ್ರಮದಲ್ಲಿ ಮಾತನಾಡಿ, “ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಯ ಗುರಿ ಇಟ್ಟುಕೊಳ್ಳಬೇಕು ಆದರೆ ಇದಕ್ಕಾಗಿ ಅಡ್ಡದಾರಿ ಹಿಡಿಯದೆ ಒಳ್ಳೆಯ ಮಾರ್ಗದಲ್ಲಿ ಪ್ರಯತ್ನಿಸಬೇಕು. ಪ್ರಾಮಾಣಿಕತೆ, ಸಹಾನುಭೂತಿಯಂತಹ ಗುಣಗಳು ಎಂದಿಗೂ ಉತ್ತಮ ವಾತಾವರಣವನ್ನು ನಿರ್ಮಿಸುತ್ತವೆ. ಕೇವಲ ಮಾತುಗಳಲ್ಲಿ ಮೌಲ್ಯ ಪ್ರತಿಪಾದನೆಯನ್ನು ನಿಲ್ಲಿಸಿ ಮಾಡುವ ಕೆಲಸ ಕಾರ್ಯಗಳಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಎಂದರು.

ನಿಮ್ಮಲ್ಲಿ ಎಷ್ಟು ಜನ ವಿದ್ಯಾರ್ಥಿಗಳು ನಿಮ್ಮ ನಾಲ್ಕು ವರ್ಷದ ಕಾಲೇಜು ದಿನಗಳಲ್ಲಿ ವಾಚ್‍ಮನ್‍ಗೆ ಶುಭಾಶಯ ಹೇಳಿದ್ದೀರಿ? ಎಂದು ಪ್ರಶ್ನಿಸಿದ ಕೃಷ್ಣಕುಮಾರ್, ವಿದ್ಯಾರ್ಥಿಗಳು ವ್ಯಕ್ತಿತ್ವವನ್ನು ಎಲ್ಲ ರೀತಿಯಲ್ಲೂ ಉತ್ತಮಪಡಿಸಿಕೊಳ್ಳಬೇಕು, ತಮ್ಮೊಳಗೆ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಬಾಹ್ಯ ಸ್ಪರ್ಧೆಗಿಂತ ಅಂತರಂಗ ಸ್ಪರ್ಧೆ ಗೆಲ್ಲುವುದು ಬಹುಮುಖ್ಯ ಎಂದು ತಿಳಿಸಿದರು.

ಪದವಿ ಜೊತೆಗೆ ನೀವು ಜ್ಞಾನ, ಆತ್ಮವಿಶ್ವಾಸ ಗಳಿಸಬಹುದು. ಗಳಿಸಿದ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವತ್ತ ಕಾರ್ಯಪ್ರವೃತ್ತರಾಗಬೇಕು. ಜೀವನದಲ್ಲಿ ಗೆಲುವಿಗಾಗಿ ಸ್ಪರ್ಧಿಸಬೇಕು, ಆದರೆ ಅದಕ್ಕಾಗಿ ಅಡ್ಡದಾರಿ ಹಿಡಿಯುವುದು ಸೂಕ್ತವಲ್ಲ ಎಂದು ಕಿವಿಮಾತು ಹೇಳಿದರು.

ಸಿವಿ ಅಸೋಸಿಯೇಟ್ಸ್ ಅಧ್ಯಕ್ಷ ಶಶಿಕುಮಾರ್ ಅವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪ್ರಮಾಣಪತ್ರ  ವಿತರಿಸಿದರು. 32 ಬಿಇ, 20 ಎಂಟೆಕ್, ಮೂವರು ಎಂಸಿಎ ರ್ಯಾಂಕ್ ವಿಜೇತರು ಮತ್ತು 7 ಜನರಿಗೆ ಪಿಎಚ್‍ಡಿ ಪದಕ ಮತ್ತು ಪದವಿ ಪ್ರದಾನ ಮಾಡಲಾಯಿತು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಆದಿತ್ಯಾ ಎಸ್ ಒಟ್ಟು ಐದು ಪುರಸ್ಕಾರ ಸ್ವೀಕರಿದರು.

ಎನ್ಐಇ ಅಧ್ಯಕ್ಷ ಶ್ರೀನಾಥ್ ಬಂಟಿ, ಪ್ರಾಂಶುಪಾಲ ಫ್ರೊ  ಜಿ.ಎಲ್. ಶೇಖರ್, ಪರೀಕ್ಷಾ ವಿಭಾಗದ ಮುಖ್ಯಸ್ಥ ಪ್ರೋ ಟಿ.ಎನ್. ಶ್ರೀಧರ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: