ದೇಶಪ್ರಮುಖ ಸುದ್ದಿ

ನೋಟು ಅಮಾನ್ಯ: ಜೀವವಿಮೆ ಇತಿಹಾಸದಲ್ಲಿಯೇ ಅತಿ ದೊಡ್ಡ ಮೊತ್ತದ ಪಾಲಿಸಿ ಖರೀದಿಸಿದ ಉದ್ಯಮಿ

ಕಾಳಧನಿಕನೋರ್ವ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಜೀವವಿಮೆ ಪಾಲಿಸಿಗೆ ಮೊರೆ ಹೋಗಿದ್ದು ದೇಶದ ಅತ್ಯಂತ ದೊಡ್ಡ ಮೊತ್ತದ ಪಾಲಿಸಿಯನ್ನು ಮಾಡಿಸಿಕೊಂಡಿದ್ದಾನೆ.

ಮುಂಬೈ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೋರ್ವ ದಾದರ್ನ್, ಸರ್ಕಾರಿ ಸ್ವಾಮ್ಯದ ಜೀವವಿಮಾ ನಿಗಮ – ಎಲ್‍ಐಸಿ ಯಲ್ಲಿ ಸುಮಾರು 50 ಕೋಟಿ ರೂಪಾಯಿಯ ಪಾಲಿಸಿ ಮಾಡಿಸಿಕೊಂಡಿರುವುದು ಬೆಳಿಕಿಗೆ ಬಂದಿದೆ. ಇದು ದೇಶದ ಅಥವಾ ಎಲ್.ಐ.ಸಿ. ಇತಿಹಾಸದಲ್ಲೇ ಬೃಹತ್ ಮೊತ್ತದ ಪಾಲಿಸಿಯಾಗಿದೆ.

ಈ ಮೊದಲು ಬಾಲಿವುಡ್ ನಟರೊಬ್ಬರು 2 ಕೋಟಿ ರೂಪಾಯಿ ಪಾಲಿಸಿ ಮಾಡಿಸಿದ್ದ ದಾಖಲೆಯನ್ನು ಈ ಮೊತ್ತ ಮುರಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ, ದೇಶದ ದೊಡ್ಡ ಮೊತ್ತದ ನೋಟುಗಳನ್ನು ಅಮಾನ್ಯಗೊಳಿಸಿದ್ದರಿಂದ ಕಾಳಧನಿಕರು ತಮ್ಮ ಬಳಿಯಿರುವ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಇನ್ನಿಲ್ಲದ ಸಾಹಸ ಮಾಡುತ್ತಿರುವುದು ಬಹಿರಂಗ ರಹಸ್ಯವಾಗಿದ್ದು ನ. 8 ರಿಂದಲೂ ಅತಿ ಹೆಚ್ಚು ಜನರು ಎಲ್.ಐ.ಸಿ.ಯಲ್ಲಿ ಹಣ ಹೂಡುತ್ತಿದ್ದಾರೆ ಎಂಬ ಮಾಹಿತಿಯು ಸಂಸ್ಥೆಯು ಹೊರಗೆಡವಿದೆ.

 

Leave a Reply

comments

Related Articles

error: