ಮೈಸೂರು

ಕಾಣೆಯಾದ ಕ್ರೈಸ್ತ ಮತದಾರರ ಹೆಸರುಗಳು !

ಕ್ರಮಕ್ಕೆ ಒತ್ತಾಯ

ಮೈಸೂರು,ಮೇ.9 : ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಬೋಗಾದಿ ಗ್ರಾಮದ ಕ್ರಿಶ್ಚಿಯನ್ ಸಮುದಾಯದ ಮತದಾರರ ಹೆಸರುಗಳನ್ನು ಚುನಾವಣಾ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಕಾರ್ಮೆಲ್ ಮಠದ ಸಂದೇಶ್ ಜೋಸೆಫ್.ಡಿಸೋಜ ಆರೋಪಿಸಿದರು.

ಕಳೆದ 36 ವರ್ಷಗಳಿಂದ ಈ ಭಾಗದಲ್ಲಿ ವಾಸವಿರುವ ಮಠದ ಗುರುಗಳ ಹಾಗೂ ಸನ್ಯಾಸಿನಿಯರು ಕಳೆದ ಹಲವಾರು ಚುನಾವಣೆಗಳಲ್ಲಿ ಮತದಾನ ಮಾಡಿದ್ದು, ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ ಎಂಬ ಕಾರಣಕ್ಕಾಗಿ ಸುಮಾರು 200ಕ್ಕೂ ಹೆಚ್ಚು ಕ್ರೈಸ್ತ ಸಮುದಾಯಕ್ಕೆ ಸೇರಿದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಏಕಾ ಏಕಿ ತೆಗೆದು ಹಾಕಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಈ ಬಗ್ಗೆ ಗ್ರಾಮ ಲೆಕ್ಕಿಗ ಕುಮಾರ್ ಅವರನ್ನು ಸಂಪರ್ಕಿಸಿದಾಗ ತಾತ್ಸಾರದ ಉತ್ತರ ಮೂಡಿದೆ, ಅಲ್ಲದೇ ಆರ್.ಟಿ.ಐಗೆ ಅರ್ಜಿ, ಹಾಕಿದರು ಯಾವುದೇ ಉತ್ತರ ಬಂದಿಲ್ಲ, ಈ ದುಷ್ಕೃತ್ಯದ ಹಿಂದಿರುವ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ವೀಣಾ, ಸಲೀನಾ, ಅನಿಲ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: