ಮೈಸೂರು

ಸಾಧಾರಣ ಮಳೆ ನಿರೀಕ್ಷೆ

ಮೈಸೂರಿನಲ್ಲಿ ಡಿಸೆಂಬರ್ 3ರಿಂದ 7ರವರೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ನಾಗನಹಳ್ಳಿ ಸಂಶೋಧನಾ ಕೇಂದ್ರ ತಿಳಿಸಿದೆ.

ದಿನದ ಉಷ್ಣಾಂಶ 27ರಿಂದ 28ಡಿಗ್ರಿ ಸೆಲ್ಶಿಯಸ್, ರಾತ್ರಿಯ ಉಷ್ಣಾಂಶ  16ರಿಂದ 18ಡಿಗ್ರಿ ಸೆಲ್ಶಿಯಸ್ ನಿರೀಕ್ಷಿಸಬಹುದು. ಬೆಳಗಿನ ತೇವಾಂಶ 80ರಿಂದ 98 ಪರ್ಸೆಂಟ್ ಮತ್ತು ಮಧ್ಯಾಹ್ನದ ಬಳಿಕ 51ರಿಂದ 72ರ ತೇವಾಂಶವನ್ನು ನಿರೀಕ್ಷಿಸಬಹುದಾಗಿದೆ. ಗಾಳಿಯ ವೇಗ ಗಂಟೆಗೆ 4ರಿಂದ 6ಕಿಲೋಮೀಟರ್.

ಮುಂದಿನ ನಾಲ್ಕು ದಿನಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು ರೈತರು ಭತ್ತದ ಕೃಷಿಯಲ್ಲಿ ಮುಂಜಾಗರೂಕತೆ ವಹಿಸಬೇಕಿದೆ. ಜಾನುವಾರು ಇರುವ ಜಾಗದಲ್ಲಿ ರಾತ್ರಿ ಮತ್ತು ಹಗಲಿನಲ್ಲಿ ಕಡಿಮೆ ಉಷ್ಣತೆ ಇರುವುದರಿಂದ ಇಲೆಕ್ಟ್ರಿಕ್ ಬಲ್ಬ್ ಗಳನ್ನು ಬಳಸಿ ಸಾಧಾರಣ ಸ್ಥಿತಿಯಲ್ಲಿರಿಸಬೇಕು.

Leave a Reply

comments

Related Articles

error: