ಕರ್ನಾಟಕಪ್ರಮುಖ ಸುದ್ದಿಮೈಸೂರು

ಬಿಜೆಪಿ ಮುಖಂಡರ ಹೆಲಿಕಾಪ್ಟರ್ ಗಳಲ್ಲಿ ಹಣ ಸಾಗಣೆ : ಕಾಂಗ್ರೆಸ್ ವಕ್ತಾರ ಕೆ.ದಿವಾಕರ್ ಆರೋಪ

ಮೈಸೂರು,ಮೇ.9 : ಭಾರತೀಯ ಜನತಾ ಪಕ್ಷದ ಬೆಂಬಲಕ್ಕೆ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತಿದ್ದು, ಮುಖಂಡರ ಹೆಲಿಕಾಪ್ಟರ್ ನಲ್ಲಿ ಹಣ ಸಾಗಿಸಲಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಕೆ.ದಿವಾಕರ್ ಆರೋಪಿಸಿದರು.

ಚುನಾವಣಾ ಆಯೋಗದ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ತಮ್ಮದೇ ಆದ ಅಧಿಕಾರ ಹೊಂದಿದೆ, ಆದರೆ ನ್ಯಾಯಾಂಗ ವ್ಯವಸ್ಥೆಯೂ ಅನಗತ್ಯ ಮೂಗು ತೂರಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು.

ಉತ್ತರಖಂಡ್ ಉಚ್ಚನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ಜೋಸೆಫ್ ಮತ್ತು ಇಂದ್ರ್ ಮಲ್ಹೋತ್ರ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಬೇಕೆಂದು ಸರ್ವೋಚ್ಚ ನ್ಯಾಯಮಂಡಳಿ (ಕೊಲ್ಜಿಯಂ) ಶಿಫಾರಸ್ಸು ಮಾಡಿದ್ದರು ಕೇವಲ ಇಂದ್ರ್ ಮಲ್ಹೋತ್ರ ಅವರ ಹೆಸರನ್ನು ಪರಿಗಣಿಸಬೇಕೆಂದು ಕೇಂದ್ರ ಸರ್ಕಾರ ಅನುಮೋದನೆ ನೀಡಿತು ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಪ್ರಬಲ ಸ್ಪರ್ಧೆಯಿದೆ, ಆದರೆ ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್ ತಮಗೆ ವಿರೋಧಿಯಾಗಿದ್ದು ಆ ಪಕ್ಷದ ಮುಖಂಡರಾದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ. ಹೆಚ್.ಡಿ.ಕೆ. ಅವರುಗಳು ಜಾತಿ, ಜಾತಿಗಳನ್ನು ಧರ್ಮಗಳನ್ನು ಕಾಂಗ್ರೆಸ್ ಒಡೆಯಿತು ಎಂದು ಆರೋಪವನ್ನು ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ಭಾವಾನಾತ್ಮಕ ವಿಚಾರಗಳ ಮೂಲಕ ಸಾರ್ವಜನಿಕರ ಮೇಲೆ ಪರಿಣಾಮ ಬೀರಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹೊರಟಿರುವ ಜೆಡಿಎಸ್ ನಡೆ ವಿಷಾಧನೀಯ, ಅಲ್ಲದೇ ಜೈಲು ಪಾಲಾದವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಿರುವ ಬಿಜೆಪಿ ಮುಖಂಡರ ನಡೆಯೂ ಕೆಳಮಟ್ಟದಾಗಿದ್ದು ಸ್ವತಃ ಯಡಿಯೂರಪ್ಪನವರೇ ಶಿಕಾರಿಪುರದಲ್ಲಿ ಸೋಲುವರು ಎಂದು ಭವಿಷ್ಯ ನುಡಿದರು.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್, ಅನಂತ ಕುಮಾರ್ ಸೇರಿದಂತೆ ಹಲವರು ಮಧ್ಯರಾತ್ರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನಕಲಿ ಮತದಾರರನ್ನು ಸೇರಿಸಿದ್ದು ಚುನಾವಣೆಯನ್ನೇ ಮುಂದೂಡಬೇಕೆಂದು ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗವೇ ನೇರವಾಗಿ ಸ್ಪಷ್ಟನೆ ನೀಡಿದ್ದು ಆ ಮುಖಂಡರಿಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಆಯೋಗಕ್ಕೆ ಮನವಿ ಮಾಡಿದರು.

ರಾಜ್ಯದೆಲ್ಲೆಡೆ ಕಾಂಗ್ರೆಸ್ ಬಗ್ಗೆ ಒಲವಿದ್ದು ಕಾಂಗ್ರೆಸ್ ಪಕ್ಷವೂ ಯಾರ ನೆರವಿಲ್ಲದೇ ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕಾರ ನಡೆಸಲಿದ್ದು ಅತಂತ್ರ ವಿಧಾನಸಭೆ ಎನ್ನುವುದು ಕಾಲ್ಪನಿಕ ಎಂದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: