ಕರ್ನಾಟಕಮೈಸೂರು

ಆರೋಪ ನಿರಾಕರಿಸಿದ ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿಯಿಂದ ಸ್ಪಷ್ಟೀಕರಣ

ದಿ ಸಿಟಿಜನ್ಸ್ ಹೌಸ್ ಮಾರ್ಟ್‍ಗೇಜ್ ಮತ್ತು ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿ ಲಿ., ಕಳೆದ 33 ವರ್ಷಗಳಿಂದಲೂ ಲೆಕ್ಕಪತ್ರಗಳನ್ನು ಕಾಲಕಾಲಕ್ಕೆ ಶಾಸನಬದ್ದ ತಪಾಸಣೆಯಾಗಿ ಪ್ರತಿ ವರ್ಷವು ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ವರದಿ ಹಾಗೂ ಸಂಘದ ಲೆಕ್ಕ ಪತ್ರಗಳನ್ನು ಮಂಡಿಸಿ ಒಪ್ಪಿಗೆ ಪಡೆಯಲಾಗಿದ್ದರೂ ಸಂಘದ ಸದಸ್ಯರಾದ ಜೆ. ಲೋಕನಾಥ ಗೌಡ ವಿನಾಕಾರಣ ಸಂಘದ ವಿರುದ್ಧ ವಿನಾ ಕಾರಣ ಅಪಪ್ರಚಾರ ನಡೆಸುತ್ತಿದ್ದು ಅದು ಸತ್ಯಕ್ಕೆ ದೂರವೆಂದು ಅಧ್ಯಕ್ಷರಾದ ಹೆಚ್. ಪಾಂಡುರಂಗಪ್ಪ ಸ್ಪಷ್ಟೀಕರಣ ನೀಡಿದ್ದಾರೆ.

ಜೆ. ಲೋಕನಾಥಗೌಡ ಕಳೆದ 2015ರ ಜನವರಿ 31ರಂದು ನಡೆದ ಆಡಳಿತ ಮಂಡಳಿಯ ಉಪಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದು ಇದರಿಂದ ಹತಾಶರಾಗಿ ಸಂಘದ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಯ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದು ಇವೆಲ್ಲವೂ ಕಲ್ಪಿತವಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಂಘವು ನಿರ್ಮಿಸಿರುವ ಬಡಾವಣೆಗೆ ಸಂಬಂಧಪಟ್ಟಂತೆ ಜಮೀನು ಖರೀದಿ ಮತ್ತು ಗುತ್ತಿಗೆದಾರರುಗಳಿಗೆ ಹಣ ಪಾವತಿ ಮಾಡಿರುವ ಪ್ರಕ್ರಿಯೆಗಳ ಬಗ್ಗೆ 2007-08 ರಿಂದ 2014-15ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗಿದೆ. ಆಗಿದ್ದರೂ ಉದ್ದೇಶಿತ ಬಡಾವಣೆಯ ಬಗ್ಗೆ ಜೆ.ಲೋಕನಾಥ ಗೌಡ ನಿವೇಶನ ಹಂಚಿಕೆಯ ಬಗ್ಗೆ ಆಡಳಿತ ಮಂಡಳಿಯು ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆಸಿದೆ ಎಂದು ಸುಳ್ಳು ಆರೋಪಗಳನ್ನು ಹೊರಿಸಿ ಸಂಘದ ಸದಸ್ಯರುಗಳಿಗೆ ಪತ್ರ ಬರೆದಿದ್ದು ಈ ಸುಳ್ಳು ಆರೋಪದ ಪತ್ರವನ್ನು  ಪರಿಗಣಿಸದೆ ಸಂಘದ ವ್ಯವಹಾರದ ವೇಳೆಯಲ್ಲಿ ಸದಸ್ಯರುಗಳು, ಠೇವಣಿದಾರರು ಹಾಗೂ ನಿವೇಶನ ಠೇವಣಿದಾರರು ಲೆಕ್ಕ ಪತ್ರಗಳನ್ನು ಪರಿಶೀಲಿಸಬೇಕು ಎಂದು ಕೋರಿದ್ದಾರೆ.

Leave a Reply

comments

Related Articles

error: