ದೇಶಪ್ರಮುಖ ಸುದ್ದಿ

ಮಗನ ವಿವಾಹಕ್ಕೆ ಪಾಲ್ಗೊಳ್ಳಲು ಲಾಲೂಗೆ ಸಿಕ್ತು 5ದಿನದ ಪೆರೋಲ್

ದೇಶ(ಬಿಹಾರ)ಮೇ.9:- ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಗೆ ಮಗನ ವಿವಾಹದಲ್ಲಿ ಪಾಲ್ಗೊಳ್ಳಲು ಐದು ದಿನಗಳ ಪೆರೋಲ್ ಲಭಿಸಿದೆ.

ಲಾಲೂ ತನ್ನ ಮಗನ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದರು. ಪೊಲೀಸ್ ಮಹಾನಿರೀಕ್ಷಕರು ಜೈಲ್ ನ ಐಜಿಯವರಿಗೆ ಅವರು ನೀಡಿದ ಅರ್ಜಿಯನ್ನು ಸಲ್ಲಿಸಿದ್ದರು.  ಇದೀಗ ಪೆರೋಲ್ ಮೇಲೆ ಐದು ದಿನಗಳ ಅನುಮತಿ ದೊರಕಿದೆ.

ಏಪ್ರೀಲ್ 18ರಂದು ಪಾಟ್ನಾದಲ್ಲಿ ನಡೆದ ತೇಜಪ್ರತಾಪ್ ನ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಲಾಲೂ ಪ್ರಸಾದ್ ಗೆ ಸಾಧ್ಯವಾಗಿರಲಿಲ್ಲ. ಇದರಿಂದ ಕುಟುಂಬಿಕರು ದುಃಖ ತೋಡಿಕೊಂಡಿದ್ದರು. ತೇಜ್ ಪ್ರತಾಪ್ ‘ಮಿಸ್ ಯು ಪಾಪಾ’ ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದರು. ಮೇವುಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯವು 2017ರ ಡಿಸೆಂಬರ್ ನಲ್ಲಿ ಶಿಕ್ಷೆ ಪ್ರಕಟಿಸಿದ್ದು, ಅಂದಿನಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.   ಮೇ.12ರಂದು ತೇಜ್ ಪ್ರತಾಪ್ ವಿವಾಹ ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗ ಪ್ರಸಾದ್ ರಾಯ್ ಮೊಮ್ಮಗಳು ಐಶ್ವರ್ಯ ರಾಯ್ ಜೊತೆ ನಡೆಯಲಿದೆ. (ಎಸ್.ಎಚ್)

Leave a Reply

comments

Related Articles

error: