ದೇಶ

ವಾಜಪೇಯಿ-ಮೋದಿ ಹೋಳಿ ನೃತ್ಯದ ವಿಡೀಯೋ ವೈರಲ್‍

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಬಾಲಿವುಡ್ ನ ಜನಪ್ರಿಯ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದ ವಿಡಿಯೋ ಈಗ ವೈರಲ್ ಆಗಿದೆ.

ಹೌದು… ಈ ವಿಡೀಯೋ ಯುಟ್ಯೂಬ್‍ನಲ್ಲಿ ವೈರಲ್ ಆಗಿದೆ. ಕೆಲವು ವರ್ಷಗಳ ಹಿಂದೆ ಚಿತ್ರೀಕರಿಸಲಾಗಿದ್ದ ಸುಮಾರು 1 ನಿಮಿಷ 50 ಸೆಕೆಂಡ್‍ ಇರುವ ವಿಡೀಯೋ ತುಣುಕೊಂದು ಮೊಬೈಲ್ ಅಲ್ಲಿ ಹರಿದಾಡುದ್ದು, ಅತಿ ಹೆಚ್ಚು ಪ್ರೇಕ್ಷಕರಿಂದ ವೀಕ್ಷಿಸಲ್ಪಟ್ಟಿದೆ.

ಬಿಜೆಪಿಯ ಈ ಇಬ್ಬರು ಮುಖಂಡರು ಹೋಳಿ ಹಬ್ಬದ ಸಂದರ್ಭ ಪರಸ್ಪರಲ್ಲಿ ಬಣ್ಣ ಎರಚುತ್ತಾ ‘ರಂಗ್ ಬರ್‍ಸೇ ಬೀಗೇ’ ಹಾಡಿನ ರಿದಮ್‍ಗೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಜೀವನವನ್ನೇ ಸಮಾಜಸೇವೆ ಹಾಗೂ ಸಂಘ ಶಕ್ತಿಗೆ ಮೂಡಿಪಾಗಿಟ್ಟಿದ್ದು, ಕಳೆದ ಹಲವಾರು ದಶಕಗಳಿಂದಲೂ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ ಎನ್ನುವುದಕ್ಕೆ ಇದೊಂದು ನಿರ್ದಶ‍ನ.

 

Leave a Reply

comments

Related Articles

error: