ಮೈಸೂರು

ಡಾ.ಬಿ.ಅರ್.ಅಂಬೇಡ್ಕರ್ ಮೊಮ್ಮಗನ ‘ಭಾರತೀಯ ರಿಪಬ್ಲಿಕ್ ಪಕ್ಷಕ್ಕೆ’ ಬೆಂಬಲ ಘೋಷಿಸಿದ ದಲಿತರು

ಮೈಸೂರು, ಮೇ.9 : ಸಂವಿಧಾನದ ವಿರೋಧಿಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷವನ್ನು ದಿಕ್ಕರಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ಭಾರತೀಯ ರಿಪಬ್ಲಿಕ್ ಪಾರ್ಟಿಯನ್ನು ದಲಿತರು ಬೆಂಬಲನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಪವಿಭಾಗೀಯ ಸಂಚಾಲಕ ಕುಮಾರ್ ಹೊಸಕೋಟೆ ತಿಳಿಸಿದರು.

ಸಂವಿಧಾನವನ್ನು ಬದಲಾವಣೆ ಮಾಡಿ ಮನುವಾದವನ್ನು ಜಾರಿಗೆ ತರುವ ಹುನ್ನಾರಗಳು ದೇಶದಲ್ಲಿ ನಡೆಯುತ್ತಿದೆ. ಮೀಸಲಾತಿಯ ಬಡ್ತಿಯನ್ನು ತೆಗೆದು ಹಾಕುವ ಸಂಚು ರೂಪಿಸುತ್ತಿರುವುದು ಕೇಂದ್ರ ಸರ್ಕಾರದ ನಿಲುವಾಗಿದೆ. ಭ್ರಷ್ಟಾಚಾರ ಹಣೆಪಟ್ಟಿ ಹೊಂದಿರುವ ಕಾಂಗ್ರೆಸ್ ಇವೆರಡು ಪಕ್ಷಗಳನ್ನು ದಲಿತರು ಮತ ನೀಡಿದೆ ಸಂವಿಧಾನ ಬದ್ಧವಾಗಿರುವ ಭಾರತೀಯ ರಿಪಬ್ಲಿಕ್ ಪಾರ್ಟಿಗೆ ಬೆಂಬಲ ನೀಡಬೇಕೆಂದು ಕೋರಿದರು.

ಪಕ್ಷದ ವರುಣ ಕ್ಷೇತ್ರದ ಅಭ್ಯರ್ಥಿ ವೀರಭದ್ರಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಅವರು ದಲಿತರನ್ನು ತುಳಿಯುತ್ತಿದ್ದಾರೆ, ೭೦ ವರ್ಷಗಳಾದರೂ ಕಾಂಗ್ರೆಸ್ ಪಕ್ಷ ದಲಿತರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ ವಂಚಿಸಿದ್ದಾರೆ. ಕಾಂಗ್ರೆಸ್ ಮ್ತು ಬಿಜೆಪಿ ಎರಡು ಕೋಮುವಾದಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ದುರಾಡಳಿತ ಮತ್ತು ಭ್ರಷ್ಟಾಚಾರವೆಸಗಿದ್ದು, ಪ್ರಮಾಣಿಕ ಅಧಿಕಾರಿಗಳಿಗೆ ಬೆಲೆಯೆ ಇಲ್ಲದಂತ್ತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಮಹಿಳೆಯರಮೇಲೆದೌರ್ಜನ್ಯ,ಅತ್ಯಚಾರ,ರೈತರಆತ್ಮಹತ್ಯೆಗಳನ್ನುತಡೆಗಟ್ಟದೆಹುಸಿಆಶ್ವಾಸನೆನೀಡಿಸರಕಾರವನ್ನುನಡೆಸುತ್ತಿರುವಈಎರಡುಪಕ್ಷಗಳು ದಲಿತರನ್ನು ಹಂತ, ಹಂತವಾಗಿ ತುಳಿಯುವ ಪ್ರಯತ್ನ ಮಾಡಿವೆ. ಹಾಗಾಗೀ ಈ ಎಲ್ಲವನನು ಪರಿಗಣಿಸಿ ದಲಿತರು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ಭಾರತೀಯ ರಿಪಬ್ಲಿಕ್ ಪಾರ್ಟಿಯನ್ನು ಬೆಂಬಲಿಸಬೇಕು ಎಂದು ತಿಳಿಸಿದರು.

ಸಮಿತಿ ಪದಾಧಿಕಾರಿಗಳಾದ ಬನ್ನಹಳ್ಳಿ ಸೋಮಣ,  ಸೋಸಲೆ ರಾಜಶೇಖರ್ ಮೂರ್ತಿ, ಬನ್ನಹಳ್ಳಿ ಬಸವರಾಜು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: