ಕರ್ನಾಟಕಪ್ರಮುಖ ಸುದ್ದಿ

ರಮೇಶ್ ಕುಮಾರ್‍ ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ಬೆಂಗಳೂರು: ಆರೋಗ್ಯ ಸಚಿವ ರಮೇಶ್ ಕುಮಾರ್ ಅರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಮೇಶ್ ಕುಮಾರ್ ಅವರು ಜ್ವರ, ಸ್ನಾಯು ಸೆಳೆತದಿಂದ ಬಸವಳಿದಿದ್ದು, ಸಾಮಾನ್ಯ ವಾರ್ಡ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸಚಿವರೊಬ್ಬರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದು ಕೆಲವರಿಗೆ ಸೋಜಿಗವೆನಿಸಿದೆ. ಆದರೆ ಅವರ ಆಪ್ತರಿಗೆ ಇದರಲ್ಲಿ ಯಾವುದೇ ಅಚ್ಚರಿ ಇಲ್ಲ. ರಮೇಶ್ ಕುಮಾರ್ ಅವರು ತಮಗೆ ಅನಾರೋಗ್ಯ ಬಂದಾಗೆಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಖಾಸಗಿ ಆಸ್ಪತ್ರೆ ಅವರು ಹೋಗುವುದೇ ಇಲ್ಲ. ಕಳೆದ ಹಲವು ವರ್ಷಗಳಿಂದ ಅವರಿಗೆ ಸ್ನಾಯು ತೊಂದರೆ ಇದೆ ಎಂದು ಗೊತ್ತಾಗಿದೆ.

Leave a Reply

comments

Related Articles

error: