
Uncategorized
ಚುನಾವಣೆ ಹಿನ್ನೆಲೆ: ಮತದಾನ, ಮತ ಎಣಿಕೆಯಂದು ಮದ್ಯ ಮಾರಾಟ ನಿಷೇಧ
ಮಂಡ್ಯ (ಮೇ 9): ವಿಧಾನಸಭಾ ಚುನಾವಣೆಯ ಮತದಾನ ಹಾಗೂ ಮತ ಏಣಿಕೆ ಕಾರ್ಯವನ್ನು ಶಾಂತ ರೀತಿಯಿಂದ ನಡೆಸುವ ಉದ್ದೇಶದಿಂದ ಮತದಾನ, ಮತ ಎಣಿಕೆ ದಿನಗಳ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ಆದೇಶ ಹೊರಡಿಸಿದ್ದಾರೆ.
ಮತದಾನ ಹಿನ್ನಲೆಯಲ್ಲಿ ಮೇ 10 ರಂದು ಸಂಜೆ 6 ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ಹಾಗೂ ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 14ರ ಮಧ್ಯರಾತ್ರಿಯಿಂದ ಮೇ 15ರ ಮಧ್ಯರಾತ್ರಿವರೆಗೆ ಎಲ್ಲಾ ರೀತಿಯ ಮದ್ಯ ಮಾರಾಟ, ಶೇಖರಣೆ, ಸಾಗಾಣಿಕೆ ಹಾಗೂ ಹಂಚಿಕೆಯನ್ನು ನಿಷೇಧಿಸಿ ಒಣದಿನವೆಂದು ಘೋಷಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.
ಸದರಿ ಅವಧಿಯಂದು ಬಾರ್, ಕ್ಲಬ್, ರೆಸ್ಟೋರೆಂಟ್, ಹೋಟೆಲ್, ಸ್ಟಾರ್ ಹೋಟೆಲ್, ಡಾಬಾ ಅಥವಾ ಯಾವುದೇ ತರಹದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಮತ್ತು ಸರಬರಾಜು ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಣದಿವಸಗಳೆಂದು ಘೋಷಣೆಯಾಗಿರುವ ಸಮಯದಲ್ಲಿ ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆ ಆಥವಾ ಹಂಚಿಕೆ ಮಾಡುವುದು ಅಪರಾಧವಾಗಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. (ಎನ್.ಬಿ)