ಪ್ರಮುಖ ಸುದ್ದಿಮೈಸೂರು

ನಮ್ಮ ಎಲ್ಲಾ ಮುಖಂಡರು ಸೇರಿ ವರುಣಾ ಅಭ್ಯರ್ಥಿ ಬಸವರಾಜು ಅವರನ್ನು ಗೆಲ್ಲಿಸಬೇಕು : ಬಿ.ವೈ. ವಿಜಯೇಂದ್ರ ಮನವಿ

ಮೈಸೂರು,ಮೇ.10:- ನಮ್ಮ ಎಲ್ಲಾ ಮುಖಂಡರು ಸೇರಿ ವರುಣಾ ಅಭ್ಯರ್ಥಿ ಬಸವರಾಜು ಅವರನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಮನವಿ ಮಾಡಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಒಂದು ತಿಂಗಳ ಹಿಂದೆ ವರುಣ ಕ್ಷೇತ್ರದ ಮೂಲಕ ಹಳೆ ಮೈಸೂರು ಭಾಗಕ್ಕೆ ಬಂದಿದ್ದೆ. ಈವಾಗ ವರುಣಾದಲ್ಲಿ ರಾಜಕೀಯ ಚಟುವಟಿಕೆ ಆರಂಭವಾಗಿದೆ. ನಾನು ಅಭ್ಯರ್ಥಿಯಾಗದಿದ್ದರೂ ನನ್ನನ್ನು ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನ ಕೊಟ್ಟು ಹಳೆ ಮೈಸೂರು ಭಾಗದಲ್ಲಿ ಓಡಾಡಬೇಕು  ಎಂದು ಹೈಕಮಾಂಡ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಪ್ರಚಾರ ಮಾಡಿದ್ದೇನೆ.  ವರುಣಾ ಕ್ಷೇತ್ರದಲ್ಲಿ ಸಣ್ಣ ಪುಟ್ಟ ಗದ್ದಲ  ಆಗಿದೆ. ಆದರೆ ಇದರ ಬಗ್ಗೆ ಕ್ಷೇತ್ರದ ಜನರನ್ನು ಕ್ಷಮೆಯಾಚಿಸಿದ್ದೇನೆ. ನಮ್ಮ ಎಲ್ಲಾ ಮುಖಂಡರು ಸೇರಿ ಬಸವರಾಜು ಅವರನ್ನು ಗೆಲ್ಲಿಸಬೇಕು. ನನಗೆ ಮತದಾರರು ಜಾತ್ಯಾತೀತವಾಗಿ ಪ್ರೀತಿ ತೋರಿದ್ದಾರೆ. ವರುಣಾದಲ್ಲಿ ಬಸವರಾಜು ಅವರು ಗೆಲ್ಲುತ್ತಾರೆ. ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಲು ಬಿಜೆಪಿ ಸರ್ಕಾರ ಬರುತ್ತದೆ. ಹಳೆಮೈಸೂರು ಭಾಗದಲ್ಲಿ ಬಹಳ ಆಶ್ಚರ್ಯ ರೀತಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದು ಬರಲಿದ್ದಾರೆ.  ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು. ಸ್ಪಷ್ಟ ಬಹುಮತ ಬಂದೆ ಬರುತ್ತೆ, ಅತಂತ್ರ  ಸ್ಥಿತಿ  ಕಲ್ಪನೆ  ಅಸ್ಪಷ್ಟವಾಗಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು. ನಾನು ಇದೀಗ ಮತ್ತೆ ಶಿಕಾರಿಪುರಕ್ಕೆ ತೆರಳುತ್ತಿದ್ದೇನೆ. ಈ ಭಾಗದ ಜನರು ನನಗೆ ಅತಿಯಾದ ಪ್ರೀತಿ ತೋರಿದ್ದಾರೆ. ಮೈಸೂರಿನ ಎಲ್ಲಾ ಜನತೆಗೂ ಕೃತಜ್ಞತೆ ಸಲ್ಲಿಸುತ್ತೇನೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ  ಬಿಜೆಪಿಯ ಪ್ರಮುಖರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: