ಲೈಫ್ & ಸ್ಟೈಲ್

ಕಿಡ್ನಿ ಸಮಸ್ಯೆಯನ್ನು ಕಂಡು ಹಿಡಿಯುವುದು ಹೀಗೆ

  • ದೇಹದಲ್ಲಿರುವ ಕಲ್ಮಶವನ್ನು ಹೊರಹಾಕಿ ದೇಹಾರೋಗ್ಯವನ್ನು ಕಾಪಾಡಲು ಕಿಡ್ನಿಯ ಕೆಲಸ ಅತಿ ಮುಖ್ಯ. ಕಿಡ್ನಿಯಲ್ಲೇನಾದರು ಸಮಸ್ಯೆ ಮೂಡಿದರೆ ಈ ಕೆಳಕಂಡ ಲಕ್ಷ್ಮಣಗಳಿಂದ ಗುರುತಿಸಬಹುದು.
  • ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ರಕ್ತದ ಕಣಗಳು ಕಾಣಿಸಿಕೊಳ್ಳುವುದು.
  • ಕೆಲಸ ಮಾಡಲು ಆಯಾಸವೆನಿಸುವುದು.
  • ಹಸಿವೆ ಎಂಬುದೇ ಇರುವುದಿಲ್ಲ , ಬೇಗನೆ ನಿದ್ರೆ ಬರುವುದಿಲ್ಲ. ನಿದ್ರೆ ಬಂದರೂ ಗಾಢ ನಿದ್ದೆ ಸಾಧ‍್ಯವಿಲ್ಲ.
  • ಕೈ-ಕಾಲುಗಳಲ್ಲಿ ಗಂಡು, ಊತವಿದ್ದು ವಿಪರೀತ ನೋವಿದ್ದರೆ ತಕ್ಷಣ ಜಾಗೃತರಾಗಿ, ತಜ್ಞರ ಬಳಿ ತಪಾಸಣೆ ನಡೆಸಿ.
  • ತ್ವಚೆ ಒಣಗುವುದು, ತುರಿಕೆಯುಂಟಾಗುವುದು. ವಾಂತಿ ಬೇಧಿ ಸಮಸ್ಯೆ ಪದೇ ಪದೇ ಕಾಡಿಸಿದರೆ.
  • ಕಣ್ಣಿನ ಸುತ್ತಲೂ ಉಬ್ಬಿದಂತಿದ್ದರೆ, ಆಹಾರ ಪದಾರ್ಥದ ರುಚಿ ಗೋಚರಿಸದೆ ಇರುವುದು. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿ ಅನೀಮಿಯಾ ಸಮಸ್ಯೆ ಕಾಣಿಸಿಕೊಳ್ಳುವುದು.
  • ಈ ಮೇಲ್ಕಂಡ ಲಕ್ಷಣಗಳು ನಿಮಗೆ ಕಾಣಿಸಿಕೊಂಡರೆ ಕಿಡ್ನಿ ಸಮಸ್ಯೆ ನಿಮಗೆ ಕಾಡುತ್ತಿದೆ ಎಂದರ್ಥ. ಈ ಲಕ್ಷಣಗಳು ಕಂಡುಬಂದರೆ ತಜ್ಷ ವೈದ್ಯರ ಬಳಿ ಪರೀಕ್ಷಿಸಿ ಔಷದೋಪಚಾರ ನಡೆಸಿ.

Leave a Reply

comments

Related Articles

error: