ಮೈಸೂರು

ವ್ಯವಹಾರಕ್ಕಿಳಿದ ಚಿಣ್ಣರು ; ಬೆರಗಾದ ಗ್ರಾಹಕರು

ಮೈಸೂರು,ಮೇ.10:- ಇದನ್ನು ತಗೋಳ್ಳಿ ಅಕ್ಕ, ಇದನ್ನು ತಗೋಳ್ಳಿ ಆಂಟಿ ತುಂಬಾ ಫ್ರೆಶ್ ಆಗಿದೆ. ಇಲ್ಲಿ ಬನ್ನಿ ಅಕ್ಕ ಮಸಾಲ ಪುರಿ ತಿನ್ನಿ ಮನೆಯಲ್ಲೇ ತಯಾರಿಸಿದ್ದು, ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ, ಈ ತಂಪಾದ ಪಾನೀಯ ತಗೊಳಿ ಎಂದು ಒಬ್ಬರ ಜೊತೆ ಒಬ್ಬರು ಅಲ್ಲಿ ಹೋಗುತ್ತಿದ್ದವರನ್ನು ಕರೆದು ವ್ಯಾಪಾರಕ್ಕೆ ಇಳಿದಿದ್ದರು.

ಮಾರುಕಟ್ಟೆಯನ್ನೇನಾದ್ರೂ ರಂಗಾಯಣದ ವನರಂಗಕ್ಕೆ ಸ್ಥಳಾಂತರಿಸಿಬಿಟ್ಟಿದ್ದಾರೋ ಹೇಗೆ ಎಂದೆನಿಸುವಷ್ಟು ವನರಂಗದ ಆವರಣ ಇಂದು ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿತ್ತು. ಚಿಕ್ಕ ಚಿಕ್ಕ ಪುಟಾಣಿಗಳು ಇಂದು ಮಾರುಕಟ್ಟೆ ನಿರ್ಮಿಸಿ ವ್ಯಾಪಾರಕ್ಕಿಳಿದಿದ್ದರು. ರಂಗಾಯಣದ ವನರಂಗದಲ್ಲಿ  ಚಿಣ್ಣರ ಮೇಳದ ಅಂಗವಾಗಿ ಇಂದು ಚಿಣ್ಣರ ಸಂತೆಯನ್ನು ಆಯೋಜಿಸಲಾಗಿತ್ತು. ಮಕ್ಕಳದ್ದೇ ದರ್ಬಾರು ನಡೆದಿದ್ದು, ವ್ಯವಹಾರ ಜ್ಞಾನವನ್ನು ಬೆಳೆಸಿಕೊಳ್ಳುತ್ತಿದ್ದರು. ಅವರ ವ್ಯವಹಾರ ಜ್ಞಾನಕ್ಕೆ ನುರಿತವರು ಬೆರಗಾಗಿದ್ದರು. ಮಕ್ಕಳು ಆಟ ಪಾಠಗಳ ಜೊತೆ ಹೊರ ಜಗತ್ತಿನೊಂದಿಗೂ ಬೆರೆಯಲಿ. ಅವರೂ ವ್ಯವಹಾರ ಜ್ಞಾನವನ್ನು ಬೆಳೆಸಿಕೊಳ್ಳಲಿ ಎಂಬ ಸದಾಶಯದೊಂದಿಗೆ ಪ್ರತಿವರ್ಷವೂ ಚಿಣ್ಣರ ಮೇಳದ ಕೊನೆಯ ದಿನ ಮಕ್ಕಳಿಗಾಗಿ ಚಿಣ್ಣರ ಸಂತೆ ನಡೆಸಲಾಗುತ್ತಿದ್ದು, ಚಿಣ್ಣರು ತತ್ಪರರಾಗಿ ಸಂತೆಯಲ್ಲಿ ತೊಡಗಿಸಿಕೊಂಡಿದ್ದರು, ಸೊಪ್ಪು, ತರಕಾರಿಗಳು, ಹೂ-ಹಣ್ಣು, ಸಿಹಿ ತಿಂಡಿಗಳು, ತಂಪು ಪಾನೀಯ, ಚಾಟ್ಸ್ ಸೇರಿದಂತೆ ಹಲವು ಪದಾರ್ಥಗಳನ್ನು ತಂದು ಮಾರುಕಟ್ಟೆಯಲ್ಲಿರಿಸಿ ಕೂಗಿ ಕೂಗಿ ಕರೆದು ಗ್ರಾಹಕರ ಗಮನ ಸೆಳೆಯುತ್ತಿರುವುದು ಕಂಡು ಬಂತು.

ಮಕ್ಕಳ ಚಿಣ್ಣರ ಸಂತೆ ಅಲ್ಲಿ ನೆರೆದಿದ್ದ ಹಿರಿಯರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮಧ್ಯಾಹ್ನ ಓಕುಳಿಯಾಟ ನಡೆಯಲಿದೆ. (ಜಿ.ಕೆ,ಎಸ್.ಎಚ್)

 

 

 

Leave a Reply

comments

Related Articles

error: