ಮೈಸೂರು

ಪೊಳ್ಳು ಭರವಸೆ ನೀಡಿ ದಲಿತರಿಗೆ ವಂಚನೆ: ಸಿಎಂ ವಿರುದ್ಧ ಕಿಡಿ

ಮೈಸೂರು,ಮೇ.10 : ದಲಿತರನ್ನು ಮತ ಬ್ಯಾಂಕ್ ಗಳಾಗಿ ಬಳಸಿದ್ದು ಕೇವಲ ಪೊಳ್ಳು ಭರವಸೆಗಳ ಮೂಲಕ ದಲಿತರನ್ನು ಸಿಎಂ ಸಿದ್ದರಾಮಯ್ಯನವರು ವಂಚಿಸುತ್ತಿದ್ದಾರೆ ಎಂದು ದಲಿತ ಮುಖಂಡ, ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಬೆಳವಾಡಿ ಶಿವಕುಮಾರಸ್ವಾಮಿ ದೂರಿದರು.

ಎಸ್ ಸಿ ಎಸ್ಟಿ ಕಾಯ್ದೆಯನ್ನು ದುರ್ಬಲಗೊಳಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಂದೇ ಒಂದು ಜಿ.ಪಂ. ಸ್ಥಾನವನ್ನು ದಲಿತರಿಗೆ ಮೀಸಲಿರಿಸದೆ ತುಳಿದಿದ್ದಾರೆ.  ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತ ಕಾಯಲ ವಿಫಲವಾಗಿವೆ, ಅಲ್ಲದೇ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಅವರನ್ನು ಪಕ್ಷದಲ್ಲಿ ವ್ಯವಸ್ಥಿತವಾಗಿ ತುಳಿಯುತ್ತಿದ್ದು ಕಾಂಗ್ರೆಸ್ ಸದಾ ದಲಿತ ವಿರೋಧಿಯಾಗಿದ್ದು ದಲಿತರ ನಾಯಕರು ಬೆಳೆಯಲು ಅವಕಾಶ ನೀಡದ ಸಿಎಂ ಸಿದ್ದರಾಮಯ್ಯನವರು ಪ್ರಸ್ತುತ ಚುನಾವಣೆಯಲ್ಲಿ ಸೋಲಿಸುವ ಮೂಲಕ ಪಾಠ ಕಲಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಸ್ವಜನಪಕ್ಷಪಾತ, ಭ್ರಷ್ಟಾಚಾರ ದುರಾಡಳಿತ ಪಿಡುಗನ್ನು ತೊಲಗಿಸಿ ಜನಸ್ನೇಹಿ ಅಭಿವೃದ್ಧಿ ಸರ್ಕಾರ ರಾಜ್ಯಕ್ಕೆ ಬೇಕಾಗಿದ್ದು ಆದ್ದರಿಂದ ದಲಿತರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಆಶ್ವಾಸನೆ ನೀಡಿರುವ ಜೆಡಿಎಸ್ ಅನ್ನು ಬೆಂಬಲಿಸಬೇಕೆಂದು ದಲಿತ ಸಮುದಾಯದವರಲ್ಲಿ ಮನವಿ ಮಾಡಿದರು.

ಗೋಷ್ಠಿಯಲ್ಲಿ ಹಿನಕಲ್ ಸೋಮು, ನಂದೀಶ್, ಜೆ.ಚಿಕ್ಕಜವರಯ್ಯ ಇತರರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: