ಮೈಸೂರು

ಜೆಡಿಎಸ್ ಬೆಂಬಲಿಸುತ್ತಿರುವ ‘ವಿಶ್ವಕರ್ಮ’ರು : ತಪ್ಪಾಗಿ ಅರ್ಥೈಸಿದೆ

ಮೈಸೂರು,ಮೇ. 10 : ‘ವಿಶ್ವಕರ್ಮರ ನಡೆ ಜೆಡಿಎಸ್ ಕಡೆ’ ಎಂದು ಕೆಲ ಸಮಾಜಘಾತುಕರು ವಿಶ್ವಕರ್ಮರೆಲ್ಲರೂ ಜೆಡಿಎಸ್ ಪರವೆಂದು ತಪ್ಪಾಗಿ ಅರ್ಥೈಸಲಾಗಿದ್ದು ಈ ಬಗ್ಗೆ ಸಮುದಾಯದವರು ಜಾಗೃತರಾಗಿ ಎಂದು ಮೈಸೂರು ಗ್ರಾಮಾಂತರ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಕಾರ್ಯದರ್ಶಿ ಸಿ.ಟಿ.ಆಚಾರ್ಯ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮಾಜದ ಬಿನ್ನಾಭಿಪ್ರಾಯವನ್ನು ಬದಿಗಿರಿಸುವುದಕ್ಕಾಗಿ ‘ವಿಶ್ವಕರ್ಮರ ಪಡೆ ಸಾಮಾಜಿಕ ನ್ಯಾಯದ ಕಡೆ’ ಎಂಬ ಅಭಿಯಾನದಡಿ ಜಾಗೃತಗೊಳಿಸುತ್ತಿದ್ದು, ಸರ್ವರಿಗೂ ಸಮಪಾಲು, ಸಮಬಾಳು ಧ್ಯೇಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಂದ ಸಮಾಜದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ತಿಳಿಸಿದರು.

ಸಮುದಾಯದ ಬಿ.ಬಿ.ಪತ್ತಾರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಾಮಾಜಿಕ ನ್ಯಾಯ ನೀಡಿದ್ದಾರೆ. ಶೇ.3ರಷ್ಟು ಒಳಮೀಸಲಾತಿ ತಾ.ಪಂ, ಜಿ.ಪಂ, ನಗರಪಾಲಿಕೆ ಚುನಾವಣೆಗಳಲ್ಲಿ ಮೀಸಲಾತಿ,  ಸರ್ಕಾರ ಮಟ್ಟದಲ್ಲಿ ವಿಶ್ವಕರ್ಮ ಜಯಂತಿ ಸೇರಿದಂತೆ, ನಿಗಮ ಮಂಡಳಿ ಸ್ಥಾಪಿಸಿ ರಾಜಕೀಯ ಶಕ್ತಿಯನ್ನು ತುಂಬಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ವಿಶ್ವಕರ್ಮ ಸಮುದಾಯದ ಚಂದ್ರು, ಬಸವಣ್ಣ, ಸೋಮಾಚಾರ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: