ಕರ್ನಾಟಕಪ್ರಮುಖ ಸುದ್ದಿ

ಯಡಿಯೂರಪ್ಪ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದ ಸಚಿವ ಎಂ.ಬಿ.ಪಾಟೀಲ್!

ವಿಜಯಪುರ (ಮೇ 10): ಪದೇ ಪದೇ ಮೇ 17 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಎಂದು ಹೇಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಚಿವ ಎಂ.ಬಿ.ಪಾಟೀಲ್ ಟಾಂಗ್ ನೀಡಿದ್ದಾರೆ.

ಯಡಿಯೂರಪ್ಪ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಯುವಂತೆ ಮಾಡುತ್ತಿದ್ದಾರೆ. ಅವರನ್ನು ನೋಡಿದ್ರೆ ಪಾಪ ಕೆಟ್ರು ಅನಿಸುತ್ತೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರಿಗೆ ಅರಳು-ಮರಳಾಗಿ ಹತಾಶರಾಗಿದ್ದಾರೆ. ಅಲ್ಲದೇ ಅವರು ಮುಖ್ಯಮಂತ್ರಿ ಆಗುವುದಿಲ್ಲ. ಹೀಗಾಗಿ ಅವರ ಮುಂದಿನ ದಿನಗಳು ಸುಮಯವಾಗಿರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ವ್ಯಂಗ್ಯದ ಧಾಟಿಯಲ್ಲಿ ಹೇಳಿದ್ದಾರೆ.

“ಅವರ ನಿವೃತ್ತಿ ಜೀವನ ಸುಖಕರವಾಗಿರಲಿ, 100 ವರ್ಷ ಬಾಳಲಿ, ಹಾಗೇ ನನ್ನ ಹಾಗೇ ಅವರಿಗೂ ಬಿ.ಪಿ (ರಕ್ತದೊತ್ತಡ) ಜಾಸ್ತಿ ಇದೆ. ಇದರಿಂದ ಬೆಳಗ್ಗೆ ಹಾಗೂ ಸಂಜೆ ತಪ್ಪದೆ ವಾಕಿಂಗ್ ಮಾಡಿ ಅರಾಮಾಗಿರಲಿ” ಎಂದೂ ಉಚಿತ ಸಲಹೆ ನೀಡಿದ್ದಾರೆ. (ಎನ್.ಬಿ)

Leave a Reply

comments

Related Articles

error: