ಕರ್ನಾಟಕ

ಸಾಹಿತಿಗಳಿಗೂ ಪೊಲೀಸ್‍ ರಕ್ಷಣೆ ನೀಡಬೇಕಾದ ಪರಿಸ್ಥಿತಿಯೇ ದುರಂತ: ಗಿರಡ್ಡಿ ಗೋವಿಂದರಾಜು

ಸತ್ಯ ಹೇಳಿದರೆ ಬರೆದರೆ ಪ್ರಾಣಕ್ಕೆ ಸಂಚಕಾರ ಬರುವ ಸಂದರ್ಭ ಒದಗಿಬಂದಿದ್ದು, ಪ್ರಸ್ತುತ ದಿನಗಳಲ್ಲಿ ಸಾಹಿತಿಗಳು ಪೊಲೀಸರ ರಕ್ಷಣೆಯಲ್ಲಿ ಓಡಾಡಬೇಕಾಗಿರುವುದು ಸಾಮಾಜಿಕ ದುರಂತ ಎಂದು ಹಿರಿಯ ಚಿಂತಕ, ಸಾಹಿತಿ ಗಿರಿಡ್ಡಿ ಗೋವಿಂದರಾಜು ಬೇಸರ ವ್ಯಕ್ತಪಡಿಸಿದ್ದಾರೆ.

dr-m-m-kalburgi-300x168
ಎಂ.ಎಂ. ಕಲಬುರ್ಗಿ

ಅವರು ರಾಯಚೂರಿನಲ್ಲಿ ಜರುಗುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಜೀವಭಯದ ಹಂಗು ತೊರೆದು ಅಭಿವ್ಯಕ್ತಿ ಸ್ವಾತಂತ್ರವನ್ನು ನಿರ್ಭೀತಿಯಿಂದ ಆಚರಿಸಬೇಕಾಗಿದೆ. “ವ್ಯಕ್ತಿಯನ್ನು ಸಾಯಿಬಹುದೇ ಹೊರತು ಆತನ ವಿಚಾರಗಳನಲ್ಲ” ಎಂದು ಹೆಸರು ಉಲ್ಲೇಸಿಸದೆ ಇದ್ದರೂ ಹಿರಿಯ ಸಾಹಿತಿ ಎಂ.ಎಂ. ಕಲ್ಬುರ್ಗಿಯವರ ಹತ್ಯೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಎಡ ಮತ್ತು ಬಲಪಂಥಿಯರು ಸಿದ್ಧಾಂತ ಕಟ್ಟುಪಾಡುಗಳಿಂದ ಹೊರಬಂದು ಅನುಸಂಧಾನ ನಡೆಸಬೇಕಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಚಾಚಾರವಲ್ಲ. ಇನ್ನೊಬ್ಬರ ಚಾರಿತ್ರ್ಯವಧೆ ಹಾಗೂ ದೇಶ ವಿರೋಧಿ ಹೇಳಿಕೆಗಳನ್ನು ನೀಡಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನಲಾಗುವುದಿಲ್ಲ. ಎಡ ಹಾಗೂ ಬಲ ಪಂಥಿಯರೆನ್ನದೆ ಸಾಮರಸ್ಯದಿಂದ ಕೂಡಿ ಬಾಳಬೇಕು. ಎಲ್ಲರ ಹೇಳಿಕೆಯೂ ಸತ್ಯವಾಗಲು ಸಾಧ್ಯವಿಲ್ಲ, ಆದರೆ ಸತ್ಯ ಕಂಡುಕೊಳ್ಳುವ ತಾಳ್ಮೆ ನಮ್ಮಲ್ಲಿರಬೇಕು ಎಂದರು.

Leave a Reply

comments

Related Articles

error: