ಕರ್ನಾಟಕಪ್ರಮುಖ ಸುದ್ದಿ

ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ!

ಮಂಗಳೂರು (ಮೇ 10): ಕಾಂಗ್ರೆಸ್’ನ ಹಿರಿಯ ನಾಯಕ, ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ನಗರದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಸಿದ್ದರಾಮಯ್ಯರಿಗೆ ಸಲಹೆಗಳನ್ನು ಕೊಟ್ಟಿದ್ದು ಹೌದು. ದುರಹಂಕಾರಿ ಮನೋಭಾವ ಬದಲಿಸದಿದ್ದರೆ ಸೋಲ್ತಾರೆ ಎಂದಿದ್ದೆ. ಪಕ್ಷಕ್ಕಿಂತ ತಾನೇ ದೊಡ್ಡವನೆಂದು ನಡೆದುಕೊಂಡರೆ ಉಳಿಗಾಲವಿಲ್ಲ. ಈಗಲೂ ಹೇಳ್ತೇನೆ, ದುರಹಂಕಾರ ಬಿಟ್ಟರೆ ಸಿದ್ದರಾಮಯ್ಯ ಉಳೀತಾರೆ. ಇಲ್ಲಾಂದ್ರೆ ಸೋಲುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ತದ್ವಿರುದ್ಧ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ ಅವರು, “ನಾನು ಸಲಹೆ ಕೊಟ್ಟಿದ್ದು ಕಾಂಗ್ರೆಸ್ ಪಕ್ಷದ ಉಳಿವಿಗಾಗಿ. ಸಿದ್ದರಾಮಯ್ಯ ಅವರು ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಮುಂದೆ ಕೂಡ ಸಿದ್ರಾಮಯ್ಯರೇ ಸಿಎಂ ಆಗ್ತಾರೆ” ಎಂದೂ ಹೇಳಿದರು.(ಎನ್.ಬಿ)

Leave a Reply

comments

Related Articles

error: