ಕರ್ನಾಟಕಪ್ರಮುಖ ಸುದ್ದಿ

ಕು. ವೀರಭದ್ರಪ್ಪ ಗಡಿ ಪ್ರದೇಶ ಅಧ್ಯಯನ ಸಮಿತಿ ಅಧ್ಯಕ್ಷ

ರಾಯಚೂರು: ಗಡಿ ಪ್ರದೇಶ ಅಧ್ಯಯನ ಸಮಿತಿ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಕು. ವೀರಭದ್ರಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.  ಸಮಿತಿಗೆ ರಾಯಚೂರು, ಬಳ್ಳಾರಿ, ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ತಂಡವು 6 ತಿಂಗಳ ಕಾಲ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ. ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಅಧ್ಯಯನಕ್ಕೆ ಅನುದಾನ ಕೊರತೆ ಇಲ್ಲ, ಸಾಕಷ್ಟು ಅನುದಾನ ಲಭ್ಯವಿದೆ. ಸಮ್ಮೇಳನದಲ್ಲಿ ನಡೆಯುವ ಚರ್ಚೆಗಳು ನಿರರ್ಥಕವಲ್ಲ. ಇತ್ತೀಚೆಗೆ ಹೊರನಾಡ ಕನ್ನಡಿಗರ ಸಮಾವೇಶ ಆಯೋಜಿಸಲಾಗಿತ್ತು. ಅಲ್ಲಿ ಕೇಳಿ ಬಂದ ಕುಂದುಕೊರತೆಗಳ ಪರಿಹಾರದ ನಿಟ್ಟಿನಲ್ಲಿ ಗಡಿ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಲು ‘ಗಡಿ ಪ್ರದೇಶ ಅಧ್ಯಯನ ಸಮಿತಿ ರಚಿಸಿ  ಕು. ವೀರಭದ್ರಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಎಂದು ಬಳಿಗಾರ್ ಹೇಳಿದರು.

Leave a Reply

comments

Related Articles

error: