ದೇಶ

ತರಕಾರಿ ಮಾರುವವನಿಗೆ ಬಂತು ಲಕ್ಷಾಂತರರೂ. ವಿದ್ಯುತ್ ಬಿಲ್: ವ್ಯಕ್ತಿ ನೇಣಿಗೆ ಶರಣು

ದೇಶ(ಜೌರಂಗಾಬಾದ್)ಮೇ.11:- ತರಕಾರಿ ಮಾರುವವನಿಗೆ ಲಕ್ಷತಾಂತರ ರೂ.ವಿದ್ಯುತ್ ಬಿಲ್ ಬಂದ ಕಾರಣ ಆತ ಆತ್ಮಹತ್ಯೆಗೆ ಶರಣಾದ ಘಟನೆ ಔರಂಗಾಬಾದ್ ನ ಪುಂಡಲೀಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ ನಗರ ಪ್ರದೇಶದಲ್ಲಿ ನಡೆದಿದೆ.

ಮೃತನನ್ನು ಜಗನ್ನಾಥ ನೆಹಾಜಿ ಶೆಲಕೆ(36) ಎಂದು ಹೇಳಲಾಗಿದ್ದು, ಈತ ತರಕಾರಿ ಮಾರಾಟಜೀವನ ಸಾಗಿಸುತ್ತಿದ್ದ. ಈತನಿಗೆ 8.64ಲಕ್ಷರೂ. ವಿದ್ಯುತ್ ಬಿಲ್ ಬಂದಿತ್ತು ಎನ್ನಲಾಗಿದ್ದು, ಈ ಕುರಿತು ತೀವ್ರ ಚಿಂತಿತನಾಗಿದ್ದ. ವಿದ್ಯುತ್ ಸರಬರಾಜು ನಿಗಮಕ್ಕೆ ತೆರಳಿವಿದ್ಯುತ್ ಬಿಲ್ ಸರಿ ಇಲ್ಲವೆಂದು ಹೇಳಿದ್ದ. ಈತ ಡೆತ್ ನೋಟ್ ಕೂಡ ಬರೆದಿಟ್ಟಿದ್ದು, ವಿದ್ಯುತ್ ಬಿಲ್ ಹೆಚ್ಚು ಬಂದ ಕಾರಣ ಚಿಂತಿತನಾಗಿದ್ದೇನೆ. ನಮ್ಮ ಮನೆಯಲ್ಲಿ 1,000ದೊಳಗೆ ತಿಂಗಳಿಗೆ ವಿದ್ಯುತ್ ಖರ್ಚಾಗುತ್ತದೆ ಎಂದು ಬರೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಲೇ ಜಾಗೃತರಾದ ಅಧಿಕಾರಿಗಳು ಸಿಬ್ಬಂದಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರಂತೆ. (ಎಸ್.ಎಚ್)

Leave a Reply

comments

Related Articles

error: