ಕರ್ನಾಟಕ

ಕರ್ನಾಟಕದ ಶ್ರೀನಿಧಿ ರಮೇಶ್‍ಗೆ “ಮಿಸ್ ಸುಪ್ರಾ ನ್ಯಾಷನಲ್-2016″ರ ಪ್ರಶಸ್ತಿ

2015 ರ ಮಿಸ್ ಕರ್ನಾಟಕ ಪ್ರಶಸ್ತಿ ವಿಜೇತೆ ಕರ್ನಾಟಕದ ಶ್ರೀನಿಧಿ ರಮೇಶ್ ಶೆಟ್ಟಿ ‘ಮಿಸ್ ಸುಪ್ರಾ ನ್ಯಾಷನಲ್ 2016 ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಸ್ಪರ್ಧೆಯಲ್ಲಿ 70 ದೇಶಗಳ ಸುಂದರಿಯರು ಪಾಲ್ಗೊಂಡಿದ್ದರು. ಮಂಗಳೂರಿನ ಕನ್ನಿಗೋಳಿ ಮೂಲದವರಾದ 23 ವರ್ಷದ ಶ್ರೀನಿಧಿ ರಮೇಶ್ ಶೆಟ್ಟಿ ಬೆಂಗಳೂರಿನ ಶ್ರೀ ಭಗವಾನ್ ಜೈನ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಪ್ರಸ್ತುತ ಆ್ಯಕ್ಸೆಂಚರ್ ಕಂಪನಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಈಕೆ ಮಿಸ್ ದಿವಾ-2016 ರ ಮೊದಲ ರನ್ನರ್`ಆಪ್ ಆಗುವ ಮೂಲಕ ಮಿಸ್ ಸುಪ್ರಾ ನ್ಯಾಷನಲ್ 2016 ರಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದಿದ್ದರು.

Leave a Reply

comments

Related Articles

error: