ಕರ್ನಾಟಕ

ಅಕ್ರಮವಾಗಿ ಮತ ಚಲಾಯಿಸಿದ್ದೇ ಆದಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ

ರಾಜ್ಯ(ಮಂಗಳೂರು)ಮೇ.11:- ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆಸುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಸಲುವಾಗಿ ಪ್ರತಿಯೊಂದು ಬೂತ್ ಗಳ ಮೇಲೆಯೂ ವಿಶೇಷ ನಿಗಾ ವಹಿಸಿರುವುದಾಗಿ ಕೆಲ ದಿನಗಳ ಹಿಂದೆಯೇ ಬಿಜೆಪಿ ಯುವ ಮೋರ್ಚಾ ಎಚ್ಚರಿಸಿತ್ತು.

ಅದರನ್ವಯ ಕದ್ರಿ ಪೊಲೀಸ್ ಠಾಣೆಯಲ್ಲಿ ಮೂಲತಃ ಕೇರಳದ ಸದ್ಯ ಮಂಗಳೂರಿನಲ್ಲಿ ವಾಸವಿರುವ ಕುಮಾರಿ ದೀನಾ ಶಾಜಿ ಎಂಬವರ ಮೇಲೆ ಮಂಗಳೂರು ದಕ್ಷಿಣ ಹಾಗೂ ಕೇರಳದಲ್ಲಿ ಅಕ್ರಮ ಮತದಾರ ಚೀಟಿ ಹೊಂದಿರುವುದರ ಬಗ್ಗೆ ಮೊದಲ ಪ್ರಕರಣ ದಾಖಲಾಗಿದೆ.

ಮಂಗಳೂರು ನಗರದಲ್ಲಿ ಇನ್ನೂ ಇಂತಹ ಹಲವಾರು ಅಕ್ರಮ ಮತದಾರರು ಇರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿದ್ದು ಅವರ ಮೇಲೂ ಸಹ ಗಮನ ಇರಿಸಲಾಗಿದೆ. ಅವರ ವಿರುದ್ಧ ಸೂಕ್ತ ಸಾಕ್ಷ್ಯಧಾರ ಕೂಡಾ ಲಭ್ಯವಾಗಿದ್ದು ಮತದಾನದ ದಿನ ಅವರು ಅಕ್ರಮವಾಗಿ ಮತ ಚಲಾಯಿಸಿದ್ದೇ ಆದಲ್ಲಿ ಕೂಡಲೇ ‘ಪ್ರಜಾಪ್ರತಿನಿಧಿ ಕಾಯ್ದೆ’ಯಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಯಾರದ್ದೋ ರಾಜಕೀಯ ಹಿತಾಸಕ್ತಿಗಾಗಿ ತಮ್ಮ ಸುಂದರ ಭವಿಷ್ಯ ಹಾಳು ಮಾಡಿಕೊಳ್ಳಬಾರದೆಂದು ಈ ಮೂಲಕ ಮತ್ತೊಮ್ಮೆ ಎಚ್ಚರಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(ಜಿ.ಕೆ,ಎಸ್.ಎಚ್)

Leave a Reply

comments

Related Articles

error: