ಮೈಸೂರು

ಶ್ರೀನಿವಾಸ ಪ್ರಸಾದ್ ಪಕ್ಷಾಂತರಿಯಲ್ಲ- ತತ್ವಾಂತರಿ :ದ.ಸಂ.ಸ ಟೀಕೆ

ಟೀಕಿಸುವ ಅರ್ಹತೆ ತಮಗಿಲ್ಲ

ಮೈಸೂರು. ಮೇ.10 : ದಲಿತ ಚಳುವಳಿ, ದಲಿತ ನಾಯಕರನ್ನು, ದ.ಸಂ.ಸ ಕೈಗೊಂಡ ರಾಜಕೀಯ ತೀರ್ಮಾನವನ್ನು ಟೀಕಿಸುವ ಬದಲು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ವಿಷಾಧಿಸಿದರು.

ನಮ್ಮನ್ನು ಅವಕಾಶವಾದಿ ವಸೂಲಿಕಾರರು. ರೋಲ್ ಕಾಲ್ ನಡೆಸುವವರು ಎಂದು ಹೇಳುವ ಅರ್ಹತೆ ತಮಗಿಲ್ಲ. ತಾವೊಬ್ಬ ಪಕ್ಷಾಂತರಿಯಲ್ಲ ತತ್ವಾಂತರಿಯಾಗಿದ್ದು ದಲಿತರು ಸೇರಿದಂತೆ ಸಮುದಾಯಕ್ಕೂ ನಿಷ್ಠೆ ತೋರಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಂವಿಧಾನಕ್ಕೆ ಅಪಾಯವೊದಗಿದೆ ಇಂತಹ ಸಂದಿಗ್ಧತೆಯಲ್ಲಿ ದಲಿತರ ಉಳಿವಿಗಾಗಿ ಕಾಂಗ್ರೆಸ್ ಬೆಂಬಲಿಸಿದ್ದೇವೆ, ಆದರೆ .ಸ್ವಾಭಿಮಾನಿಯೆಂದು ಹೇಳುವ ತಮ್ಮಲ್ಲೊಬ್ಬ ದುರಭಿಮಾನಿಯಿದ್ದು, ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸಿದ ತಾವು ಅವಕಾಶವಾದಿಗಳು ಎಂದು ಲೇವಡಿ ಮಾಡಿದರು.

ದಲಿತರ ಮೀಸಲಾತಿಯಡಿ ಗಳಿಸಿರುವ ಆಸ್ತಿಯನ್ನು ತಾವು ದಲಿತರಿಗೆ ಹಂಚಿ. ಸಮುದಾಯದ ಹೋರಾಟಗಾರರ ಆಸ್ತಿಯನ್ನು ನಾವು ಘೋಷಿಸುತ್ತೆ ಯಾರು ಹೆಚ್ಚು ಗಳಿಸಿದ್ದಾರೆ ಎಂದು ಬಹಿರಂಗವಾಗಲಿ ಎಂದು ಸವಾಲೆಸೆದರು.

ದಲಿತ ಹೋರಾಟಗಾರ ಬಸವಲಿಂಗಪ್ಪನವರ ಮೊಮ್ಮಗನನ್ನು ಬಿಜೆಪಿಯಿಂದ ಚುನಾವಣಾ ಕಣಕ್ಕಿಸಿದ್ದು. ಒಂದೊಮ್ಮೆ ಅವರು ಬದುಕಿದ್ದರೆ ಇಂದು ಆತ್ಮಹತ್ಯೆ ಮಾಡಿಕೊಳ್ಳುತಿದ್ದರು ಎಂದು ಟೀಕಿಸಿದ್ದಾರೆ.

. ಸಮುದಾಯವನ್ನೇ ಬಂಡವಾಳ ಮಾಡಿಕೊಂಡು ಸ್ವಾರ್ಥ ಮೆರೆದಿರುವ ಶ್ರೀನಿವಾಸ ಪ್ರಸಾದ್.ದಲಿತರ ಬಗ್ಗೆ ನೀಡಿರುವ ಹೇಳಿ ಖಂಡಿಸಿ ಅವರಿಗೆ ಬಹಿರಂಗ ಪತ್ರ ಬರೆದಿದ್ದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಆಲಗೂಡು ಶಿವಕುಮಾರ್, ದೇವಗಳ್ಳಿ ಸೋಮಶೇಖರ್, ಚುಂಚನಹಳ್ಳಿ ಮಲ್ಲೇಶ್, ಕಾರ್ಯ ಬಸವಣ್ಣ, ಮಲ್ಲಹಳ್ಳಿ ನಾರಾಯಣ್ ಇದ್ದರು.( ವರದಿ : ಕೆ.ಎಂ.ಆರ್)

Leave a Reply

comments

Related Articles

error: