ದೇಶಪ್ರಮುಖ ಸುದ್ದಿ

ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿದ ಶಿವಸೇನೆ: ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ

ಮುಂಬೈ (ಮೇ 11): ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರವಾದ ಪಾಲುಸ್ ಕಾಡೆಗಅಂವ್’ನಲ್ಲಿ ಮೇ 28 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಶಿವಸೇನೆಯು ಕಾಂಗ್ರೆಸ್ಸಿಗೆ ಬೆಂಬಲ ನೀಡಲು ನಿರ್ಧರಿಸಿಸದೆ. ಈ ಬೆಳವಣಿಗೆಯ ಬಗ್ಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ಶಿವಸೇನೆಯ ಈ ನಿರ್ಧಾರವು ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದ್ದು, ಈ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ರಾಮ್ ಕದಮ್ ಅವರು “ತನ್ನ ಉಗುರನ್ನು ತಾನೇ ಕತ್ತರಿಸಿಕೊಂಡು, ತಾನು ಹುತಾತ್ಮ ಎನ್ನುವ ಸ್ವಭಾವ ಶಿವಸೇನೆಯದು. ಪಾಲುಸ್ ಕಾಡೆಗಾಂವ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸುತ್ತಿರುವ ಶಿವಸೇನೆಯ ನಡೆ ಶಿವಸೇನೆಯ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಾಲುಸ್ ಕಾಡೆಗಾಂವ್ ಕ್ಷೇತ್ರದ ಶಾಸಕರಾಗಿದ್ದ ಪತಂಗರಾವ್ ಕದಮ್ ಅವರ ನಿಧನದ ನಂತರ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಅವರ ಪುತ್ರ ವಿಶ್ವಜಿತ್ ಕದಮ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಕ್ಷೇತ್ರದಲ್ಲಿ ತಾನು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಶಿವಸೇನೆ ಘೋಷಿಸಿದ್ದು ಬಿಜೆಪಿ ವಲಯದಲ್ಲಿ ಬೇಸರ ಮಾತ್ರವಲ್ಲ ಆಕ್ರೋಶ ತರಿಸಿದೆ. ಇತ್ತೀಚೆಗಷ್ಟೇ ಕೇಂದ್ರ ಎನ್‍ಡಿಎ ಮೈತ್ರಿಕೂಟದಿಂದಲೂ ಶಿವಸೇನೆ ಆಚೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. (ಎನ್.ಬಿ)

Leave a Reply

comments

Related Articles

error: