ಮನರಂಜನೆ

ಮತ್ತೆ ಮದುವೆಯಾಗಿದ್ದಾರಂತೆ ಗಾಯಕ ಹಿಮೇಶ್ ರೇಶಮಿಯಾ!

ದೇಶ(ಮುಂಬೈ)ಮೇ.11:- ಬಾಲಿವುಡ್ ನಲ್ಲಿ ಇತ್ತೀಚಿನ ದಿನಗಳಲ್ಲಿ ತಾರೆಯರ ವಿವಾಹದ್ದೇ ಸುದ್ದಿ. ನಟಿಯರಾದ ಸೋನಂ ಕಪೂರ್, ನೇಹಾ ಧೂಪಿಯಾ ವಿವಾಹದ ನಂತರ ಇದೀಗ ಕೇಳಿ ಬರುತ್ತಿರುವ ಹೆಸರು ಗಾಯಕ ಹಿಮೇಶ್ ರೇಶಮಿಯಾ ಅವರದ್ದು.

ಹಿಮೇಶ್ ರೇಶಮಿಯಾ ತನ್ನ ಸ್ನೇಹಿತೆ ಸೋನಿಯಾ ಕಪೂರ್ ಅವರನ್ನು ವಿವಾಹವಾಗುತ್ತಿದ್ದಾರಂತೆ. ಕೆಲವು ವರದಿಗಳ ಪ್ರಕಾರ ಇವರಿಬ್ಬರೂ ಈಗಾಗಲೇ ರಹಸ್ಯವಾಗಿ ವಿವಾಹವಾಗಿದ್ದಾರೆ ಎನ್ನಲಾಗುತ್ತಿದ್ದು, ಶುಕ್ರವಾರ ರಿಸೆಪ್ಷನ್ ನಡೆಯಬಹುದು ಎನ್ನಲಾಗುತ್ತಿದೆ. ಇದೀಗ ಅವರ ಅಭಿಮಾನಿಗಳಿಗೆ ಅವರಿಬ್ಬರ ಭಾವಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಇದು ಅವರ ಎರಡನೇ ವಿವಾಹವಾಗಿದ್ದು,ಇದಕ್ಕೂ ಮುನ್ನ 1995ರಲ್ಲಿ ಕೋಮಲ ಎಂಬವರೊಂದಿಗೆ ವಿವಾಹವಾಗಿದ್ದರು. ಆದರೆ 2017ರಲ್ಲಿ ಇಬ್ಬರೂ ಬೇರೆಯಾಗಿದ್ದರು. ವಿಚ್ಛೇದನದ ನಂತರ ನಾನು ನನ್ನ ಪತ್ನಿ ಪರಸ್ಪರ ಒಬ್ಬರಿಗೊಬ್ಬರು ಗೌರವಿಸುತ್ತೇವೆ ಎಂದಿದ್ದರು. ಇವರಿಗೆ ಗಂಡು ಮಗು ಕೂಡ ಇದೆ. ಮಗನೂ ಕೂಡ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾನೆ ಎನ್ನಲಾಗುತ್ತಿದೆ. ‘ಜಲಕ್ ದಿಕಲಾಜಾ’, ‘ಆಶಿಕ್ ಬನಾಯಾ’ ಹಾಡುಗಳಿಂದ ಜನಪ್ರಿಯರಾಗಿದ್ದರಲ್ಲದೇ, ಸಿನಿಮಾಗಳಲ್ಲಿಯೂ ನಟಿಸಿದ್ದರು. (ಎಸ್.ಎಚ್)

Leave a Reply

comments

Related Articles

error: