ಮೈಸೂರು

ಸರ್ಕಾರ ನೀಡುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಬೇಕು : ಶಿವಣ್ಣ

ಆದಿವಾಸಿಗಳಿಗೆ ಸರ್ಕಾರ ನೀಡುವ ಸೌಲಭ್ಯಗಳ ಅರಿವಿಲ್ಲ. ಈ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಮಾಜಿ ಸಚಿವ ಎಂ.ಶಿವಣ್ಣ ತಿಳಿಸಿದರು.

ಮೈಸೂರಿನ ಇನ್ಸಟಿಟ್ಯೂಟ್   ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ವತಿಯಿಂದ ಆದಿವಾಸಿ ಮುಖಂಡ ಬಿರ್ಸಾಮುಂಡ ಜಯಂತೋತ್ಸವ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಬಿರ್ಸಾಮುಂಡ ಭಾವಚಿತ್ರ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಆದಿವಾಸಿಗಳಲ್ಲಿ ಅವರ ಅರಣ್ಯ ಹಕ್ಕುಗಳು, ಶೈಕ್ಷಣಿಕ ಹಕ್ಕುಗಳು, ಸರ್ಕಾರದಿಂದ ಅವರಿಗಿರುವ ಸೌಲಭ್ಯಗಳು ಕುರಿತು ಅವರಿಗೆ ಅರಿವಿಲ್ಲ. ಆದ್ದರಿಂದ ಮೊದಲು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಅದಕ್ಕಾಗಿ ಇಂತಹ ಸಭೆ-ಸಮಾರಂಭಗಳು, ಚರ್ಚೆ, ಸಂವಾದ, ವಿಚಾರ ಸಂಕಿರಣಗಳನ್ನು ಆಗಾಗ್ಗೆ ನಡೆಸುತ್ತಿರಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಕೋಟ್ಯಾಂತರ ರೂ. ಅನುದಾನ ಬಿಡುಗಡೆಯಾಗುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.

ಆದಿವಾಸಿಗಳಿಗೆ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸುವ ಸಲುವಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಅಭಿವೃದ್ದಿ ಮಂಡಳಿಗೆ ಹಣಕಾಸು ದೊರೆಯುವಂತೆ ಮಾಡಬೇಕು. ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ಸಿಗುವಂತೆ ಮಾಡುವ ಜವಾಬ್ದಾರಿ ನನ್ನದು ಎಂದು ಹೇಳಿದರು. ಮುಖ್ಯವಾಗಿ ರಾಜಕೀಯ ಸ್ಥಾನಮಾನಗಳು ಸಿಗುವಂತೆ ಮಾಡುತ್ತೇನೆ.  ಈ ಜನಾಂಗಕ್ಕೆ  ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ  ಜೆ.ಕೆ.ಗೋಪಾಲ ಪೂಜಾರ, ಗಿರಿಜನ ಸಂಶೋಧನ ಸಂಸ್ಥೆಯ ಟಿ.ಟಿ ಬಸವನಗೌಡ, ನರೇಂದ್ರ, ಮೂರ್ತಿ, ಗೋವಿಂದರಾಜು, ಅಂಜನಮೂರ್ತಿ, ನಿಂಗಣ್ಣ, ಸುಲೋಚನ, ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: