ಕರ್ನಾಟಕಮೈಸೂರು

ಮೈಸೂರು ವಿ.ವಿ.ಯಿಂದ ಸೆ.11ರಂದು ವಿಶೇಷ ಉಪನ್ಯಾಸ ಮಾಲಿಕೆ

ಮೈಸೂರು ವಿಶ್ವವಿದ್ಯಾಲಯದ ಡಾ.ಎಸ್. ರಾಧಾಕೃಷ್ಣನ್ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರದಿಂದ ವಿಶೇಷ ಉಪನ್ಯಾಸ ಮಾಲಿಕೆಯನ್ನು ಆಯೋಜಿಸಿದೆ.

ಸೆ. 11ರ ಬೆಳಿಗ್ಗೆ 11 ಗಂಟೆಗೆ ನಗರದ ಸರಸ್ವತಿಪುರಂ ಸರ್ಕಾರಿ ಮುದ್ರಣಾಲಯದ ಎದುರು ಡಾ.ಎಸ್. ರಾಧಾಕೃಷ್ಣನ್ ಭವನದಲ್ಲಿ ನಡೆಯಲಿದ್ದು ನಿಜಗುಣ ಸತ್ಸಂಗ ಬಳಗದ ಅಧ್ಯಕ್ಷ ಸದಾಶಿವಗುರುಗಳು “ಶ್ರೀರಮಣ ಮಹರ್ಷಿ: ಜೀವನ ಮತ್ತು ತತ್ವಜ್ಞಾನ”ದ ಬಗ್ಗೆ, ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸ್ವಾ ಶಾಂತಿವ್ರತಾನಂದರಿಂದ “ಡಾ.ಎಸ್.ರಾಧಾಕೃಷ್ಣನ್ ಅವರ ದೃಷ್ಟಿಯಲ್ಲಿ ಉಪನಿಷತ್ ದರ್ಶನ್” ಕುರಿತ ಉಪನ್ಯಾಸ ಕಾರ್ಯಕ್ರಮವಿದೆ.

ಅಧ್ಯಕ್ಷತೆ ಮೈಸೂರು ವಿವಿಯ ತತ್ವಶಾಸ್ತ್ರ ವಿಭಾಗದ ಡಾ. ಹೆಚ್.ಎಲ್. ಚಂದ್ರಶೇಖರ್ ವಹಿಸುವರು.

Leave a Reply

comments

Related Articles

error: