ಮೈಸೂರು

ವ್ಹೀಲ್ ಚೇರ್ ನಲ್ಲಿ ತಾಯಿಯನ್ನು ಕರೆತಂದು ಮತದಾನ ಮಾಡಿಸಿದ ಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ

ಮೈಸೂರು,ಮೇ.12:-  ಮಹಾನಗರಪಾಲಿಕೆಯ ಸದಸ್ಯ ಎಂ.ಎಸ್ ಬಾಲಸುಬ್ರಹ್ಮಣ್ಯ (ಸ್ನೇಕ್ ಶ್ಯಾಮ್)   ಮತಗಟ್ಟೆಗೆ ವ್ಹೀಲ್ ಚೇರ್ ನಲ್ಲಿ ತಮ್ಮ ತಾಯಿಯನ್ನು ಕರೆತಂದು ಮತ ಚಲಾಯಿಸಿದರು.

ಅವರ ಮಾತೃಶ್ರೀಯವರಾದ ನಾಗಲಕ್ಷ್ಮಿ(85) ಅವರಿಗೆ  ಅನಾರೋಗ್ಯದಿಂದ ನಡೆಯಲು ಆಗದ ಕಾರಣ ಕಳೆದ 5 ವರ್ಷದಿಂದ ಹಾಸಿಗೆ ಹಿಡಿದಿದ್ದರು. ಮತದಾನ ನಮ್ಮ ಹಕ್ಕು ಹೆಸರಿನಲ್ಲಿ ಜಾಗೃತಿ ಮೂಡಿಸಲು ತಾಯಿಯನ್ನು ವ್ಹೀಲ್ ಚೇರ್ ನಲ್ಲಿ ಕರೆತಂದಿದ್ದಾರೆ. ಚಾಮರಾಜ ಕ್ಷೇತ್ರದ ಬೃಂದಾವನ ಬಡಾವಣೆಯ ಮತಗಟ್ಟೆಯಲ್ಲಿ ಮತದಾನ ಮಾಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: