ಮೈಸೂರು

ಸಿದ್ದರಾಮನ ಹುಂಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಕ್ಕು ಚಲಾವಣೆ : ಸಿಲ್ಲಿ ರೀಸನ್‌ಗೆ ಆಯೋಗ ಚುನಾವಣೆ ಮುಂದೂಡಿದ್ದು ಸರಿಯಲ್ಲ :ಸಿಎಂ

ಮೈಸೂರು,ಮೇ.12:- 2018 ವಿಧಾನ ಸಭಾ ಚುನಾವಣೆ ನಡೆಯುತ್ತಿದ್ದು, 222 ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ.

ಕ್ಷೇತ್ರದ ಘಟಾನುಘಟಿ ಅಭ್ಯರ್ಥಿಗಳಲ್ಲಿ ಈಗಾಗಲೇ ಹಲವರು ಮತ ಚಲಾಯಿಸಿದ್ದಾರೆ.  ಸಿದ್ದರಾಮನಹುಂಡಿಗೆ ಆಗಮಿಸಿದ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ದೇವರಾದ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು. ಇದೇ ವೇಳೆ ವರುಣ ಕ್ಷೇತ್ರದ ಅಭ್ಯರ್ಥಿ ಡಾ.ಯತೀಂದ್ರ ಸಿದ್ದರಾಮಯ್ಯ ಕೂಡ ಮತದಾನ ಮಾಡಿದರು.

ಬಳಿಕ ಇದೇ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು  ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾವನ್ನು ವ್ಯಕ್ತಪಡಿಸಿದರು. ನಾನು ಯಾವುದೇ ದೇವರುಗಳ ಪೂಜೆ ಪುನಸ್ಕಾರಗಳಿಗೆ ಹೋಗೋಲ್ಲ. ದೇವರು ಹೃದಯದಲ್ಲಿರುತ್ತಾನೆ ದೇವರು ಆಗಲೂ ಇದ್ದ. ಈಗಲೂ ಇದ್ದ. ಮುಂದೆಯೂ ಇರುತ್ತಾನೆ ಎಂದರು.  ನಾನು  ಚಾಮುಂಡೇಶ್ವರಿ ಕ್ಷೇತ್ರದಲ್ಲಿ10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಬಾದಾಮಿಯಲ್ಲೂ ನನ್ನ ಗೆಲ್ಲುವು ಖಚಿತ. ಚಾಮುಂಡೇಶ್ವರಿಯಲ್ಲಿ ಬಿಜೆಪಿ ಡಮ್ಮಿ ಅಭ್ಯರ್ಥಿ ಕಣಕ್ಕಿಳಿಸಿದೆ. ಆದರೂ ನಾನೂ ಉತ್ತಮವಾದ ಅಂತರದಿಂದ ಗೆಲ್ಲುತ್ತೇನೆ. ರಾಜ್ಯಾದ್ಯಂತ ನಮ್ಮ‌ಪಕ್ಷದ ಪರವಾಗಿ ಉತ್ತಮ ಮತದಾನವಾಗುತ್ತಿದೆ ಎಂದರು.

ಆರ್ ಆರ್ ನಗರ ಚುನಾವಣೆ ಬಗ್ಗೆ  ಪ್ರತಿಕ್ರಿಯಿಸಿದ ಅವರು  ಸಿಲ್ಲಿ ರೀಸನ್‌ಗೆ ಆಯೋಗ ಚುನಾವಣೆ ಮುಂದೂಡಿದ್ದು ಸರಿಯಲ್ಲ. ಆಯೋಗದ ಬಳಿ ಏನಿದೆ ಸಾಕ್ಷಿ.? ಯಾವುದೋ ಕಾರ್ಡ್‌ಗಳು ಎಲ್ಲೋ ಸಿಕ್ಕಿದ್ದಕ್ಕೆ ಚುನಾವಣೆ ಮುಂದೂಡಿದರೆ, ಹೇಗೆ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯ ಎಂದು  ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: