ಮೈಸೂರು

ಇದೇ ಮೊದಲ ಬಾರಿಗೆ ಮತ ಚಲಾಯಿಸಿದ್ದೀರಾ ? ಹಾಗಿದ್ದಲ್ಲಿ ಮಸಾಲೆ ದೋಸೆ ತಿನ್ನಲು ಹೋಗಿ!

ಮೈಸೂರು,ಮೇ.12:- ನೀವು ಇದೇ ಮೊದಲ ಬಾರಿಗೆ ಮತ ಚಲಾಯಿಸಿದ್ದೀರಾ ಹಾಗಾದರೆ ಮಸಾಲೆ ದೋಸೆ ತಿನ್ನಲು ಹೋಗಿ. ಇಂಥಹ ಒಂದು ಸುವರ್ಣ ಅವಕಾಶ ಇಂದು ಮೈಸೂರಿನಲ್ಲಿ ಸೃಷ್ಟಿಯಾಗಿದೆ.

ಮೊದಲ ಮತದ ಸವಿನೆನಪಿಗೆ ಇದೇ ಪ್ರಥಮಬಾರಿಗೆ ಮತ ಚಲಾಯಿಸಿದ 18ವರ್ಷ ತುಂಬಿದ ಯುವಕ ಯುವತಿಯರಿಗೆ ಇಂದು ಸಂಜೆ ಉಚಿತ ಮಸಾಲೆ ದೋಸೆ ತಿನ್ನುವ ಸುವರ್ಣಾವಕಾಶವನ್ನು ನಗರದ ಬಿ.ಎನ್.ರಸ್ತೆಯಲ್ಲಿರುವ ಹೋಟೆಲ್ ವಿಷ್ಣುಭವನ್ ಕಲ್ಪಿಸಿಕೊಟ್ಟಿದೆ ಎಂದು ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ತಿಳಿಸಿದ್ದಾರೆ.

ತಮ್ಮ ಮೊದಲ ಮತದಾನದ ಸವಿನೆನಪಿಗಾಗಿ ನಮ್ಮ ಹೋಟಲ್ ನಲ್ಲಿ ಉಚಿತ “ಮಸಾಲ ದೋಸೆ “ಯನ್ನು ಇಂದು ಸಾಯಂಕಾಲ 4;30 ರಿಂದ  ರಾತ್ರಿ 8 ಗಂಟೆಯವರಿಗೆ ನೀಡಲಾಗುವುದು. ಇದೇ ಪ್ರಥಬಾರಿಗೆ ಮತ ಚಲಾಯಿಸಿದವರು ಗುರುತು ಜೊತೆಗೆ ವಯಸ್ಸಿನ ದೃಢೀಕರಣ ಪ್ರತಿಯನ್ನೂ ತಂದು. ದೋಸೆ ಸವಿದು ಆನಂದಿಸಬಹುದು. ಮತದಾನ  ಪ್ರತಿ ಪ್ರಜೆಯ ಹಕ್ಕು. ತಪ್ಪದೇ ಹಕ್ಕು ಚಲಾಯಿಸ.  ಪ್ರಜಾಪ್ರಭುತ್ವವನ್ನು ಬೆಂಬಲಿಸಿ. ನಮ್ಮ ಮತ ನಮಗೆ ಹಿತ ಎಂದು ನಾರಾಯಣ ಗೌಡ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: