
ಕರ್ನಾಟಕಪ್ರಮುಖ ಸುದ್ದಿ
ರಾಜ್ಯದಲ್ಲಿ ಹಲವು ಸಿನಿಮಾ ತಾರೆಯರಿಂದ ಮತದಾನ
ಬೆಂಗಳೂರು (ಮೇ 12): ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ‘ಚಂದನವನ’ದ ಸಿನಿಮಾ ನಟ ನಟಿಯರು ಇಂದು ತಮ್ಮ ಹಕ್ಕು ಚಲಾಯಿಸಿ ರಾಜ್ಯದ ಜನತೆಗೆ ಸ್ಫೂರ್ತಿಯಾದರು.
ಕತ್ರಿಗುಪ್ಪೆಯಲ್ಲಿ ನಟ ಉಪೇಂದ್ರ, ಪತ್ನಿ ನಟಿ ಪ್ರಿಯಾಂಕಾ ಉಪೇಂದ್ರ ಜೊತೆಯಾಗಿ ಆಗಮಿಸಿ ಮತ ಚಲಾಯಿಸಿದರು. ಬ್ಯಾಟರಾಯನಪುರ ಕ್ಷೇತ್ರದ ರಾಚೇನಹಳ್ಳಿಯಲ್ಲಿ ಸೆಂಚುರಿ ಸ್ಟಾರ್, ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ತಮ್ಮ ಪುತ್ರಿ ಜೊತೆ ಆಗಮಿಸಿ ಮತ ಚಲಾಯಿಸಿದರು.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಪತ್ನಿ ಸಮೇತರಾಗಿ ಆಗಮಿಸಿ ಸದಾಶಿವನಗರದ ಪೂರ್ಣಪ್ರಜ್ಞಾ ಶಾಲೆಯಲ್ಲಿ ಮತ ಚಲಾಯಿಸಿದರು. ರಾಘವೇಂದ್ರ ರಾಜ್ ಕುಮಾರ್ ಕೂಡ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ನಟ ಸೃಜನ್ ಲೋಕೇಶ್ ಕೂಡ ಮತ ಚಲಾಯಿಸಿದ್ದು, ಬಳಿಕ ಮಾತನಾಡಿದರು.
ಇನ್ನು ಯಶವಂತಪುರ ಕ್ಷೇತ್ರದ ಚಿಕ್ಕ ಬಿದಿರೆಕಲ್ ಮತಕ್ಷೇತ್ರದಲ್ಲಿ ಪತ್ನಿಯೊಂದಿಗೆ ಆಗಮಿಸಿ ದೊಡ್ಡಣ್ಣ ಮತ ಚಲಾಯಿಸಿದರು. ಹಾಗೆಯೇ ಚಂದ್ರಾಲೇಔಟ್ನಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು. ಹಾಗೆಯೇ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಟ ಶ್ರೀಮುರಳಿ, ತಂದೆ-ತಾಯಿ ಜೊತೆ ಬಂದು ಮತದಾನ ಮಾಡಿದರು.
ನಮ್ಮ ಹಣೆಬರಹ ಚೆನ್ನಾಗಿರ್ಬೇಕು ಅಂದ್ರೆ ಹಣೆಗೆ ಒತ್ತಬೇಕು- ಎಲ್ಲರೂ ಮತ ಹಾಕಿ ಅಂತ ಭಿಕ್ಷೆ ಬೇಡೋದಲ್ಲ- ಮತದಾನ ಪ್ರತಿಯೊಬ್ಬರ ಹಕ್ಕು – ನಾನು ಯಾರುಗೂ ಮತ ಹಾಕಿ ಅಂತ ಹೇಳೋದಿಲ್ಲ ಅಂತ ರವಿಚಂದ್ರನ್ ಹೇಳಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 99ರಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್ ಹಾಗೂ ಪುತ್ರ ಅನೂಪ್, ಕುಟುಂಬ ಸಮೇತರಾಗಿ ಮಾತದಾನ ಮಾಡಿದರು. ನನ್ನ ಹಕ್ಕನ್ನೂ ನಾನು ಚಲಾಯಿಸಿದ್ದೇನೆ, ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿನಮ್ಮ ನಾಯಕರನ್ನುಆಯ್ಕೆ ಮಾಡುವ ಕ್ಷಣ ಇದಾಗಿದೆ ಅಂತ ದ್ವಾರಕೀಶ್ ಹೇಳಿದರು. (ಎನ್.ಬಿ)