
ಕರ್ನಾಟಕದೇಶಪ್ರಮುಖ ಸುದ್ದಿ
ಬಸ್ಸುಗಳಿಗೆ ಕಲ್ಲು: ತಮಿಳುನಾಡಿಗೆ ಕೆಎಸ್ಸಾರ್ಟಿಸಿ ಸಂಚಾರ ಸ್ಥಗಿತ
ಕರ್ನಾಟಕದ ಬಸ್ಸುಗಳಿಗೆ ತಮಿಳುನಾಡಿನಲ್ಲಿ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತಮಿಳುನಾಡಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ಕ್ರುದ್ಧರಾಗಿರುವ ಕೆಲವು ದುಷ್ಕರ್ಮಿಗಳು ನಿನ್ನೆ ರಾತ್ರಿ ಕರ್ನಾಟಕದ ಬಸ್ಸುಗಳ ಮೇಲೆ ಕಲ್ಲು, ಬೀಯರ್ ಬಾಟಲಿಗಳನ್ನು ತೂರಿದ ಘಟನೆ ನಡೆದಿದೆ. ಈ ಕಾರಣದಿಂದ ಮುಂಜಾಗ್ರತಾ ಕ್ರಮಾವಾಗಿ ತಾತ್ಕಾಲಿಕವಾಗಿ ಬಸ್ಸುಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಸಂಚಾರವನ್ನು ಪುನಾರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೆಎಸ್ಸಾರ್ಟಿಸಿ ಕೆಎಸ್ಸಾರ್ಟಿಸಿ ಭದ್ರತಾ ಮತ್ತು ಜಾಗ್ರತೆ ವಿಭಾಗದ ನಿರ್ದೇಶಕ ಬಿ.ಎನ್.ಎಸ್. ರೆಡ್ಡಿ ತಿಳಿಸಿದ್ದಾರೆ.