
ಮೈಸೂರು
ಇಂದು ಸುಬ್ರಹ್ಮಣ್ಯಸ್ವಾಮಿ ಷಷ್ಠಿ: ಭಕ್ತರಿಂದ ಹುತ್ತ ಹಾಗೂ ನಾಗದೇವತಾ ಪೂಜೆ
ಸುಬ್ರಹ್ಮಣ್ಯ ಷಷ್ಠಿ ದಿನವಾದ ಇಂದು ನಗರದ ಹಲವಾರು ಕಡೆ ಭಕ್ತಾಧಿಗಳು ಹುತ್ತಕ್ಕೆ ಪೂಜೆಸಿ ಹಾಲೆರೆದು ಶ್ರದ್ಧಾ ಭಕ್ತಿ ಮೆರೆದರು.
ನಗರದ ಸಿದ್ಧಾರ್ಥ ಲೇಔಟ್ ನಗರದ ಮೈದಾನದಲ್ಲಿರುವ ಹುತ್ತಕ್ಕೆ ಲಲಿತಾದ್ರಿಪುರಂ, ಸಿದ್ಧಾರ್ಥ ಲೇಜೌಟ್, ಆಲನಹಳ್ಳಿ, ಶಕ್ತಿನಗರ, ಟೀಚರ್ಸ್ ಕಾಲೋನಿ ಹಾಗೂ ಜೆ.ಎಸ್.ಎಸ್. ಲೇಔಟ್ನ ಭಕ್ತರು ಬೆಳಗಿನ ಬ್ರಾಹ್ಮಿ ವೇಳೆಯಿಂದಲೇ ಪೂಜಾ ಕೈಂಕರ್ಯಗಳು ನಡೆಸಿದ್ದು ಸೋದರತ್ವ ಹಾಗೂ ಶುಭದ ಪ್ರತೀಕವಾದ ಕಂಕಣವನ್ನು ಕೈಗೆ ಕಟ್ಟಿಕೊಂಡು ಹುತ್ತದ ಪೂಜೆ ಮಾಡಿದರು.
ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿಯ ದಿನವಾದ ಇಂದು ನಾಗದೇವತೆಯನ್ನು ವಿಶೇಷವಾಗಿ ಪೂಜಿಸುವುದರಿಂದ ಇಷ್ಟಾರ್ಥಗಳು ಶೀಘ್ರದಲ್ಲಿಯೇ ಸಿದ್ಧಿಸುವುದು ಎನ್ನಲಾಗಿದೆ. ಇದರಂತೆ ದೇವಸ್ಥಾನಗಳ ನಾಗಪ್ರತಿಮೆಗಳಿಗೂ ಇಂದು ವಿಶೇಷ ಪೂಜೆ, ಹಾಲಿನಾಭಿಷೇಕ ಹಾಗೂ ಮಂಗಳ ದ್ರವ್ಯಗಳಿಂದ ಪೂಜಿಸಲಾಯಿತು. ಸುಮಂಗಲಿಯರು, ದಂಪತಿಗಳು, ಮಕ್ಕಳಾದಿಯಾಗಿ ನಾಗದೇವತೆ ಆವಾಸ ಸ್ಥಾನವಾದ ಹುತ್ತಕ್ಕೆ ಹಾಲೆರದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತಿದೆ.