ಪ್ರಮುಖ ಸುದ್ದಿಮೈಸೂರು

ದಲಿತರನ್ನು ಮುಖ್ಯಮಂತ್ರಿ ಮಾಡಿದರೆ ನನ್ನ ತಕರಾರಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು,ಮೇ.13:-  ರಾಜ್ಯ ಚುನಾವಣಾ ಫಲಿತಾಂಶ ಲೋಕಸಭೆಯ ಚುನಾವಣೆಗಷ್ಟೇ ಅಲ್ಲ. ದೇಶದ ಚುನಾವಣೆಗೆ ಅಡಿಗಲ್ಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗ ಮಾತನಾಡಿದ ಅವರು ಲೋಕಸಭೆ ಚುನಾವಣೆಗೆ ಮುಂಚಿತವಾಗಿ, ರಾಜಸ್ಥಾನ,ಮಧ್ಯಪ್ರದೇಶ ಚುನಾವಣೆ ಬರಲಿದೆ.ಆ ಚುನಾವಣೆಗಳನ್ನು ಗೆದ್ದು ದೇಶವನ್ನು ಹಿಡಿತಕ್ಕೆ ತಗೆದುಕೊಳ್ಳುತ್ತೇವೆ ಎಂದರು. ದಲಿತ ಸಿಎಂ ಬೇಕು ಎಂಬ ಕೂಗು ಕೇಳಿ ಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು  ಹೈ ಕಮಾಂಡ್ ತೀರ್ಮಾನ ಮಾಡಿದರೆ ನನ್ನ ತಕರಾರಿಲ್ಲ. ದಲಿತ ಸಿಎಂ ಒಮ್ಮೆಲೇ ಮಾಡಲು ಸಾಧ್ಯವಿಲ್ಲ,  ಶಾಸಕರ ಸಮ್ಮತಿ ಬೇಕು ಎಂದರು. ನಾನು ಎರಡೂ ಕಡೆಗಳಲ್ಲಿ ಗೆಲ್ಲುವೆ .ಬಾದಾಮಿಯಲ್ಲಿ ಹೆಚ್ಚು ಬಹುಮತ ಬರಲಿದೆ. ಚಾಮುಂಡೇಶ್ವರಿಯಲ್ಲಿ ಕೂಡ ಗೆಲ್ಲುತ್ತೇನೆ. ಆದರೆ ನಿರೀಕ್ಷೆ ಮಟ್ಟದ ಲೀಡ್ ಬರದಿರಬಹುದು. ಜಿ.ಟಿ.ದೇವೇಗೌಡ ಹೆಚ್ಚು ಹಣ ಖರ್ಚು ಮಾಡಿದ್ದಾನೆ. ಆದರೆ ಹಣ ಎಲ್ಲಿಂದ ಬಂತು ಅಂತ ಗೊತ್ತಿಲ್ಲ. ಹಣಕ್ಕೆ ಹೆಚ್ಚು ಮನ್ನಣೆ ಕೊಡ್ತಾರೆ ಅಂತ ನನಗೆ ಅನಿಸಲ್ಲ ಎಂದರು. ಸಮಿಶ್ರ ಸರ್ಕಾರದ ಬಗ್ಗೆ ವಿವಿಧ ಸರ್ವೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು  ಸಮಿಶ್ರ ಸರ್ಕಾರ ಬರತ್ತೆ ಅನ್ನೋ ಸಮೀಕ್ಷೆ ಸತ್ಯ ಇರಬಹುದು ಸಂಪೂರ್ಣ ನಂಬಲು ಸಾಧ್ಯವಿಲ್ಲ ಎಂದರು.
ಆ ಬ್ರಹ್ಮ ಬಂದು ಹೇಳಿದರೂ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ನಾನು ಈ ಬಾರಿಯೇ ಚುನಾವಣೆಗೆ ನಿಲ್ಲಬಾರದು ಅಂತ ಇದ್ದೆ. ಆದರೆ ಒಬ್ಬ ಸಿಎಂ ಪಲಾಯನವಾದ ಮಾಡಿದ ಎಂದು ಹೆಸರು ಬರತ್ತೆ ಎಂದು ನಿಂತೆ. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ.ನನ್ನ ಜೊತೆ ಇರುವವರಿಗೆ ರಾಜಕೀಯ ಶಕ್ತಿ ತುಂಬುವ ಜವಾಬ್ದಾರಿ ನನ್ನ ಮೇಲಿದೆ.ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದರು.
ರಿಲ್ಯಾಕ್ಸ್ ಮೂಡ್ ನಲ್ಲಿರುವ ಅವರು ನಾನು ನಿದ್ರೆ ಮಾಡಿ ರಿಲ್ಯಾಕ್ಸ್ ಮಾಡ್ತಿನಿ ಅಷ್ಟೇ ಆದರೆ ಸಿನಿಮಾ ಅಂತೆಲ್ಲಾ ಎಲ್ಲೂ ಹೋಗಲ್ಲ.ಚುನಾವಣೆ ಮುಗೀತು ಯಾವುದೇ ಟೆನ್ಷನ್ ಇಲ್ಲ. ಆರಾಮಾಗಿ ನಿದ್ರೆ ಮಾಡುತ್ತೇನೆ ಈಗ ಬೆಂಗಳೂರಿಗೆ ತೆರಳಿ ನಾಳೆ ಸಂಜೆ ಮೈಸೂರಿಗೆ ಮತ್ತೆ ವಾಪಸ್ಸ್ ಬರ್ತೇನೆ ಎಂದಿದ್ದಾರೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: