ಮೈಸೂರು

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಮುರಿದು ಬಿದ್ದ ಮರ : ಸಂಚಾರ ಅಸ್ತವ್ಯಸ್ತ

ಮೈಸೂರು,ಮೇ.14:- ಹುಣಸೂರು ಮೈಸೂರು ಹೆದ್ದಾರಿಯಲ್ಲಿ ಮಳೆಗೆ ಮರ ಮುರಿದು ಬಿದ್ದ ಪರಿಣಾಮವಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಿನ್ನೆ ಸಾಯಂಕಾಲ ನಡೆದಿದೆ.

ಮೈಸೂರಿನಲ್ಲಿ ನಿನ್ನೆ ಭಾರಿಗಾಳಿ ಮಳೆ ಸುರಿದಿದ್ದು,ಗಾಳಿಗೆ ಹೆದ್ದಾರಿಯಲ್ಲಿ ಮರ ಉರುಳಿಬಿದ್ದ ಕಾರಣ ಸುಮಾರು ಮೂರು ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.  ವಾರಾಂತ್ಯವಾದ್ದರಿಂದ ವಾಹನಗಳ ಸಂಖ್ಯೆಯಲ್ಲಿಯೂ ಹೆಚ್ಚಳವಿತ್ತು. ಇದರಿಂದ ಪ್ರಯಾಣಿಕರು ಕೆಲಕಾಲ  ಪರದಾಡುವಂತಾಯಿತು. ಬಳಿಕ ತೆರವು ಕಾರ್ಯಾಚರಣೆಯ  ತಂಡ ಸ್ಥಳಕ್ಕಾಗಮಿಸಿ ತೆರವು ಕಾರ್ಯ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: