ಕರ್ನಾಟಕಮೈಸೂರು

ಜೆ.ಎಸ್.ಎಸ್. ವಿವಾಹ ವೇದಿಕೆಯಿಂದ ವಧೂ-ವರರ ಸಮಾವೇಶ

ಸೆ.18 ರ ಭಾನುವಾರದಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ಜೆ.ಎಸ್.ಎಸ್. ಆವರಣದಲ್ಲಿರುವ ಶ್ರೀಶಿವರಾತ್ರಿ ರಾಜೇಂದ್ರ ಭವನದ ಸಭಾಂಗಣದಲ್ಲಿ  ವಧೂ-ವರರ ಮುಖಾಮುಖಿ ಸಮಾವೇಶವು ಜರುಗಲಿದೆ.

ಜೆ.ಎಸ್.ಎಸ್. ವಿವಾಹ ವೇದಿಕೆಯ ಆಶ್ರಯದಲ್ಲಿ ಪ್ರತಿ ತಿಂಗಳು ಮೂರನೇ ಭಾನುವಾರದಂದು ವಧೂ-ವರರ ಮುಖಾಮುಖಿ ಸಮಾವೇಶವನ್ನು ಏರ್ಪಡಿಸಲಾಗುತ್ತಿದ್ದು, ನೋಂದಾಯಿಸಿಕೊಂಡವರಿಗೆ ಮಾತ್ರ ಪ್ರವೇಶ. ಈವರೆಗೆ ನೋಂದಾಯಿಸಿಕೊಂಡಿಲ್ಲದವರು ಸಮಾವೇಶದ ದಿನದಂದು ಹೆಸರು ನೋಂದಾಯಿಸಿಕೊಳ್ಳಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0821-2430322, 96110 70674ಗೆ ಕರೆ ಮಾಡಬಹುದು.

Leave a Reply

comments

Related Articles

error: