ಪ್ರಮುಖ ಸುದ್ದಿ

ಮನೋಹರ್ ಪರಿಕರ್ ವಿಡಿಯೋ ಸಂದೇಶ : ಕೆಲವು ವಾರಗಳಲ್ಲಿ ಗೋವಾ ಹಿಂದಿರುಗುತ್ತೇನೆ

ದೇಶ(ನವದೆಹಲಿ)ಮೇ.14:- ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ವಿಡಿಯೋ ಮೂಲಕ ಸಂದೇಶ ಕಳುಹಿಸಿದ್ದು, ಅಮೇರಿಕಾದಿಂದ ಕೆಲವು ವಾರಗಳಲ್ಲಿಯೇ ತನ್ನ ರಾಜ್ಯಕ್ಕೆ ಮರಳುತ್ತೇನೆ ಎಂದಿದ್ದಾರಂತೆ.

ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಈ ವಿಡಿಯೋ ಸಂದೇಶ ನೀಡಲಾಗಿದ್ದು, ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಇದನ್ನು ಪ್ರಸ್ತಾಪಿಸಿದ್ದಾರಂತೆ. ವಿಡಿಯೋ ರೆಕಾರ್ಡ್ ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಪರಿಕ್ಕರ್  ‘ಕಳೆದ ಎರಡು ತಿಂಗಳಿನಿಂದ ನಾನು ನಿಮ್ಮ ನಡುವೆ ಇಲ್ಲ. ಚಿಕಿತ್ಸೆ ಪಡೆಯುತ್ತಿದ್ದೇನೆ. ಕೆಲವು ವಾರಗಳಲ್ಲಿಯೇ ಗೋವಾಕ್ಕೆ ಹಿಂದಿರುಗುತ್ತೇನೆ’. ಅನಾರೋಗ್ಯದ ಕಾರಣ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. 2019ರ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಿದೆ. ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗುವ ಅವಶ್ಯಕತೆಯಿದೆ’ ಎಂದಿದ್ದಾರಂತೆ. (ಎಸ್.ಎಚ್)

Leave a Reply

comments

Related Articles

error: